ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕದ್ದುಮುಚ್ಚಿ ಜಮೀರ್ ವಿದೇಶ ಪ್ರವಾಸ- ತನಿಖೆಗಾಗಿ ಬಿಎಸ್‌ವೈಗೆ ಸಂಬರಗಿ ಪತ್ರ

ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನಿಯಮ ಉಲ್ಲಂಘಿಸಿ ವಿದೇಶ ಪ್ರವಾಸ ಮಾಡಿರುವ ಕುರಿತು ತನಿಖೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ.

ಸಿಎಂ ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ಸಂಬರಗಿ, 2018ರ ಜೂನ್ 6ರಿಂದ 2019ರ ಜುಲೈ 9ರ ವರೆಗೆ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಹಾರ, ನಾಗರಿಕ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದಾಗ ಜಮೀರ್ ಅಹಮದ್‌ ವಿದೇಶ ಪ್ರವಾಸ ಮಾಡಿದ್ದಾರೆ. 2019ರ ಜೂ. 8ರಿಂದ 10ರ ವರೆಗೆ ವಿದೇಶ ಪ್ರವಾಸ ಮಾಡಿದ್ದಾರೆ. ಯಾಕೆ ಅವರು ಈ ಪ್ರವಾಸದ ವಿಚಾರವನ್ನ ಸಂಬಂಧಿತ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವಿವರಿಸಿದ್ದಾರೆ.

ಜಮೀರ್ ಬಹಳಷ್ಟು ಬಾರಿ ಕೊಲಂಬೋಕ್ಕೆ ಹೋಗಿ ಬಂದಿದ್ದಾರೆ. ಆದರೂ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಆರ್‌ಟಿಐ ಮೂಲಕವೂ ಅವರ ಪ್ರವಾಸದ ಮಾಹಿತಿ ಸಿಗುತ್ತಿಲ್ಲ. ಶಾಸಕರಾಗಿರುವ ಕಾರಣ, ಸ್ಪೀಕರ್ ಅವರಿಗಾದರೂ ಮಾಹಿತಿ ನೀಡಬೇಕಿತ್ತು. ಕಾನೂನು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಎಂದಷ್ಟೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಸಂಬರಗಿ ಹೇಳಿದರು.

Edited By : Vijay Kumar
PublicNext

PublicNext

22/09/2020 11:10 pm

Cinque Terre

60.51 K

Cinque Terre

1

ಸಂಬಂಧಿತ ಸುದ್ದಿ