ಬ್ರಿಟನ್ ರಾಜ ಚಾರ್ಲ್ಸ್ 3 ಮತ್ತೆ ಕೋಪದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅದರಲ್ಲೂ ಅದು ತೀರಾ ಸಣ್ಣ ವಿಷಯಕ್ಕೆ ಚಾರ್ಲ್ಸ್ ಕೋಪಗೊಂಡಿದ್ದು, ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಕಿಂಗ್ ಚಾರ್ಲ್ಸ್ ಸಂದರ್ಶಕರ ಪುಸ್ತಕವೊಂದಕ್ಕೆ ಸಹಿ ಹಾಕುತ್ತಿರುವ ವೇಳೆ ಪೆನ್ನಿನ ಇಂಕ್ ಅವರ ಕೈ ಮೇಲೆ ಬಿದ್ದಿದೆ. ಇದರಿಂದ ಸಿಟ್ಟಿಗೆ ಒಳಗಾದ ಕಿಂಗ್ ಓಹ್ ದೇವರೇ.. ಐ ಹೇಟ್ ದಿಸ್ ಪೆನ್ ಎಂದು ಹೇಳಿದ್ದಾರೆ. ತಕ್ಷಣವೇ ಎದ್ದು ನಿಂತು ಪೆನ್ನನ್ನು ಪತ್ನಿ ರಾಣಿ ಕಾನ್ಸೋರ್ಟ್ ಕ್ಯಾಮಿಲ್ಲಾ ನೀಡಿದರು. ತನ್ನ ಕೈ ಬೆರಳುಗಳನ್ನು ಒರೆಸಿಕೊಕೊಂಡರು ಮತ್ತು 'ಪ್ರತೀ ಸಲವೂ ಇಂಥದ್ದನ್ನು ಸಹಿಸಿಕೊಳ್ಳೋಕೇ ಆಗಲ್ಲ' ಎಂದು ಗೊಣಗಿಕೊಳ್ಳುತ್ತಾ ಹೊರ ನಡೆದರು.
PublicNext
16/09/2022 07:55 am