ಬ್ರಿಟಿಷ್ ನಾಡನ್ನು ಸುಧೀರ್ಘ ಅವಧಿಗೆ ಆಳಿದ 2ನೇ ಎಲಿಜಬೆತ್ ರಾಣಿ ವಯೋಸಹಜ ಕಾಯಿಲೆಯಿಂದ ನಿನ್ನೆ ಗುರುವಾರ ನಿಧನರಾಗಿದ್ದಾರೆ. ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
1953ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಬ್ರಿಟನ್ ರಾಣಿಯಾಗಿ ಆಯ್ಕೆಯಾಗಿದ್ದ ಎಲಿಜಬೆತ್ ಸುಧೀರ್ಘ ಕಾಲಕ್ಕೆ ಅಂದರೆ 70 ವರ್ಷಗಳ ಕಾಲ ಬ್ರಿಟನ್ ಆಳಿದ್ದಾರೆ. ತಮ್ಮ ಆಳ್ವಿಕೆಯಲ್ಲಿ 15 ಪ್ರಧಾನಿಗಳನ್ನು ಎಲಿಜಬೆತ್ ಆಯ್ಕೆ ಮಾಡಿದ್ದಾರೆ.
ಇನ್ನು ಎಲಿಜಬೆತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. 2015 ಹಾಗೂ 2018ರಲ್ಲಿ ಬ್ರಿಟನ್‌ಗೆ ಹೋದಾಗ ಭೇಟಿಯಾಗಿದ್ದೆ. ಅವರ ಭೇಟಿ ಸ್ಮರಣೀಯ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
PublicNext
09/09/2022 07:37 am