ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗೋಲಿಯಾಕ್ಕೆ ಭೇಟಿ ಕೊಟ್ಟ ರಾಜನಾಥ್ ಸಿಂಗ್; ಅಧ್ಯಕ್ಷ ಖುರೇಲ್ಸುಖ್‌ರಿಂದ ಕುದುರೆ ಉಡುಗೊರೆ

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗೋಲಿಯಾಕ್ಕೆ ಭೇಟಿ ನೀಡಿದ್ದಾರೆ. ಅವರಿಗೆ ಮಂಗೋಲಿಯಾ ಸರ್ಕಾರ ಭರ್ಜರಿ ಉಡುಗೊರೆಯನ್ನೇ ನೀಡಿದೆ. ರಾಜನಾಥ್ ಸಿಂಗ್ ಅವರಿಗೆ ಮಂಗೋಲಿಯಾ ಅಧ್ಯಕ್ಷ ಖುರೇಲ್ಸುಖ್ ಕುದುರೆಯೊಂದನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ಈ ಮೂಲಕ ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ರಕ್ಷಣಾ ಸಚಿವ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಮಂಗೋಲಿಯಾದಲ್ಲಿರುವ ನಮ್ಮ ವಿಶೇಷ ಸ್ನೇಹಿತರಿಂದ ವಿಶೇಷ ಉಡುಗೊರೆ ಪಡೆದಿದ್ದೇನೆ.

ನಾನು ಈ ಭವ್ಯ ಸುಂದರಿಗೆ 'ತೇಜಸ್' ಎಂದು ಹೆಸರಿಸಿದ್ದೇನೆ. ಧನ್ಯವಾದಗಳು, ಅಧ್ಯಕ್ಷ ಖುರೆಲ್ಸುಖ್. ಧನ್ಯವಾದಗಳು ಮಂಗೋಲಿಯಾ," ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಬಿಳಿ ಕುದುರೆಯ ಚಿತ್ರಗಳೊಂದಿಗೆ ಟ್ವೀಟ್ ಮಾಡಿದ್ದಾರೆ.

Edited By : Abhishek Kamoji
PublicNext

PublicNext

07/09/2022 12:05 pm

Cinque Terre

18.61 K

Cinque Terre

1

ಸಂಬಂಧಿತ ಸುದ್ದಿ