ಲಂಡನ್: ನಾನು ಬ್ರಿಟನ್ ದೇಶದ ಪ್ರಧಾನಿ ಆದರೆ, ಚೀನಾ ದೇಶದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಹೀಗಂತ ಬ್ರಿಟನ್ ಪ್ರಧಾನಿ ಅಭ್ಯರ್ಥಿ ಹಾಗೂ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಹೇಳಿಕೊಂಡಿದ್ದಾರೆ.
ರಿಷಿ ಸುನಾಕ್ ಸದ್ಯ ಪ್ರಧಾನಿ ಆಯ್ಕೆ ಅಂತಿಮ ಸುತ್ತಿನಲ್ಲಿಯೇ ಇದ್ದು, ಚೀನಾ ಮತ್ತು ರಷ್ಯಾ ವಿಚಾರದಲ್ಲಿ ರಿಷಿ ಸುನಾಕ್ ಅಷ್ಟೊಂದು ಬಲಿಷ್ಠರಲ್ಲ ಎಂದು ಪ್ರತಿಸ್ಪರ್ಧಿ ಆರೋಪಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರೋ ಸುನಾಕ್,ಬ್ರಿಟನ್ ದೇಶದಲ್ಲಿರೋ ಚೀನಾದ 30 ಸಂಸ್ಥೆಗಳನ್ನ ಮುಚ್ಚುತ್ತೇವೆ. ಚೀನಿ ಸಂಸ್ಕೃತಿ ಹಾಗೂ ಭಾಷಾ ಪ್ರಭಾವ ಹರಡುವುದನ್ನ ಈ ಮೂಲಕ ತಡೆಯುತ್ತೇವೆ ಎಂದು ಸುನಾಕ್ ಈಗ ಖಡಕ್ ಹೇಳಿಕೆ ಕೊಟ್ಟಿದ್ದಾರೆ.
PublicNext
25/07/2022 12:46 pm