ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ವಿಶ್ವದ ನಂ.1 ಜನಪ್ರಿಯ ನಾಯಕನ ಸ್ಥಾನ ಉಳಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಜನಪ್ರಿಯತೆ ಕುಸಿತದಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ಮೋರಿಸ್ ಅವರು ಕೊರೋನಾ ಲಾಕ್‌ಡೌನ್ ವೇಳೆ ಪ್ರಧಾನಿ ನಿವಾಸದಲ್ಲೇ ಗುಂಡಿನ ಪಾರ್ಟಿ ನಡೆಸಿ ವಿವಾದಕ್ಕೆ ಸಿಲುಕಿದ್ದರು.
ವಿಶ್ವದ ಆಯ್ದ 13 ನಾಯಕರ ಕುರಿತು ಆಯಾ ದೇಶಗಳಲ್ಲಿ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಈ ಸಮೀಕ್ಷೆ ನಡೆಸಿದೆ. 2021ರ ನವೆಂಬರ್‌ನಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಪ್ರಥಮ ಸ್ಥಾನದಲ್ಲೇ ಇದ್ದರು. ಆಗ 70% ಅಂಕ ಗಳಿಸಿದ್ದ ಅವರು ಈ ಬಾರಿ 71% ಅಂಕ ಪಡೆದಿದ್ದಾರೆ. 2020ರ ಮೇ ತಿಂಗಳಿನಲ್ಲಿ ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಮೋದಿ ಅವರು 84% ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರು. ಶೇ.66 ಅಂಕಗಳೊಂದಿಗೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್ ಮ್ಯಾನುಯೆಲ್ ಲೊಪೆಜ್ ಒಬ್ರಡಾರ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಇಟಲಿಯ ಮಾರಿಯಾ ಡ್ರಾಘಿ (60%), ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ (48%), ಜರ್ಮನಿ ಪ್ರಧಾನಿ ಒಲಾಫ್ ಸ್ಕೋಲ್ (44%) ಅವರು ಕ್ರಮವಾಗಿ 3, 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.
PublicNext
22/01/2022 08:27 am