ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೀಘ್ರವೇ ಅಫ್ಘಾನ್‌ನಲ್ಲಿ ಸರ್ಕಾರ ರಚಿಸಲಿದ್ದೇವೆ: ತಾಲಿಬಾನಿಗಳಿಂದ ಘೋಷಣೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಶೀಘ್ರವೇ ಸರ್ಕಾರ ರಚಿಸುವುದಾಗಿ ತಾಲಿಬಾನಿಗಳು ಘೋಷಿಸಿದ್ದಾರೆ.

ಈ ಕುರಿತು ತಾಲಿಬಾನ್​ನ ವಕ್ಕಾರ ಜಬೀಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದು, "ಸರ್ಕಾರ ರಚಿಸುವ ಕುರಿತು ಅಫ್ಘಾನ್ ರಾಜಕೀಯ ನಾಯಕರ ಜೊತೆಗೆ ಮಾತುಕತೆ ನಡೆಯುತ್ತಿದೆ. ಶೀಘ್ರವೇ ಹೊಸ ಸರ್ಕಾರವನ್ನು ಘೋಷಿಸಲಿದ್ದೇವೆ" ಎಂದು ತಿಳಿಸಿದ್ದಾರೆ.

ಕಾಬೂಲ್​ಗೆ ಬಂದಿಳಿದಿರುವ ತಾಲಿಬಾನ್​ನ ಉಪ ಸಂಸ್ಥಾಪಕ ಮುಲ್ಲಾ ಅಬ್ದುಲ್ ಗನಿ ಬರಾದರ್ ಅಫ್ಘನ್ ರಾಜಕೀಯ ನಾಯಕರ ಜೊತೆ ಈಗಾಗಲೇ ಸರ್ಕಾರ ರಚಿಸುವ ಕುರಿತು ಮಾತುಕತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ. ಶನಿವಾರ ತಾಲಿಬಾನಿಗಳು ರಾಜಕೀಯ ನಾಯಕರಾದ ಮಾಜಿ ಅಧ್ಯಕ್ಷ ಹಮಿದ್ ಕರ್ಜೈ, ಅಬ್ದುಲ್ಲಾ ಅಬ್ದುಲ್ಲಾ ಹಾಗೂ ಹೆಚ್​ಸಿಎನ್​ಆರ್​​ನ ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

Edited By : Vijay Kumar
PublicNext

PublicNext

23/08/2021 07:46 am

Cinque Terre

40.99 K

Cinque Terre

3

ಸಂಬಂಧಿತ ಸುದ್ದಿ