ವಾಷಿಂಗ್ಟನ್: ನಾಲ್ಕು ದಿನ ಕಳೆದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಮಾತ್ರ ಇನ್ನೂ ಪೂರ್ಣವಾಗಿ ಹೊರಬಿದ್ದಿಲ್ಲ. ಫಲಿತಾಂಶವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುಂದೆ ಸಾಗಿದೆ. ಆರಂಭದಿಂದಲೂ ಟ್ರಂಪ್ನತ್ತ ವಾಲಿದ್ದ ಪೆನ್ಸಿಲ್ವೇನಿಯಾ ಇದೀಗ ನಿಧಾನವಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರಿಗೆ ಮುನ್ನಡೆ ತಂದುಕೊಟ್ಟಿದೆ.
538 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 270 ಆಗಿದ್ದು, ಜೋ ಬೈಡನ್ 264 ಹಾಗೂ ಡೊನಾಲ್ಡ್ ಟ್ರಂಪ್ 214 ಗೆದ್ದುಕೊಂಡಿದ್ದಾರೆ. ಫಲಿತಾಂಶ ಪ್ರಕಟವಾಗುವುದು ಬಾಕಿಯಿರುವ ಐದು ರಾಜ್ಯಗಳಲ್ಲಿ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಶುಕ್ರವಾರ ಸಂಜೆಯವರೆಗೂ ಟ್ರಂಪ್ ಮುನ್ನೆಡೆ ಸಾಧಿಸಿದ್ದರು. ಕೇವಲ ನೆವೆಡಾ ರಾಜ್ಯದಲ್ಲಿ ಬಿಡೆನ್ ಮುನ್ನಡೆಯಿದ್ದರು.
PublicNext
06/11/2020 11:28 pm