ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಬೋರ್‌ವೆಲ್ ಕೊರೆಸುವಂತೆ ಶಾಸಕ ಕುಮಠಳ್ಳಿ ಕಾಲು ಹಿಡಿದ ಮಹಿಳೆ

ಅಥಣಿ: ತಾಲೂಕಿನ ಕನ್ನಾಳ ಗ್ರಾಮದ ರುಕ್ಮಾಬಾಯಿ ಗುಲಾಬರಾವ ಕಾಂಬಳೆ ಎಂಬ ಮಹಿಳೆ ಹೊಲದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ಕೊರೆಸಿಕೊಡಿ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರ ಕಾಲಿಗೆ ಎರಗಿದ ಘಟನೆ ನಡೆದಿದೆ.

ಇವತ್ತು ಸುಮಾರು 23 ಕೋ ರೂ ವೆಚ್ಚದ ಕೊಟ್ಟಲಗಿ-ಅಥಣಿ ರಾಜ್ಯಹೆದ್ದಾರಿ ಕಾಮಗಾರಿಯ ಉದ್ಘಾನೆಯ ವೇಳೆ ಕನ್ನಾಳ ಗ್ರಾಮದ ಸರಕಾರಿ ಪ್ರಾಥಮಿಕ‌ ಶಾಲೆಗೆ ಶಾಸಕ ಕುಮಠಳ್ಳಿ ಅವರು ಭೇಟಿ‌ಕೊಟ್ಟು ಪರಿಶೀಲಿಸುತ್ತಿರುವಾಗ ಅವರ ಕಾಲಿಗೆ ನಮಸ್ಕರಿಸಿ ವಿನಂತಿಸಿದರು.

ಈ ಕುರಿತು ಮಾತನಾಡಿದ ಮಹಿಳೆ ನಾನು ನಾಲ್ಕೈದು ಬಾರಿ ಗಂಗಾಕಲ್ಯಾಣ ಬೋರವೆಲ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ಅದು ಬಂದಿರಲಿಲ್ಲ ಈ‌ ಸಲವಾದರೂ ಬೋರ್‌ವೆಲ್ ಹಾಕಿ ಕೊಡಿ ಎಂದು ಅವರಿಗೆ ಮನವಿ ಮಾಡಿದ್ದೇನೆ ಎಂದು ರುಕ್ಮಾಬಾಯಿ ಹೇಳಿದ್ದಾರೆ.

Edited By : Shivu K
PublicNext

PublicNext

22/07/2022 07:47 pm

Cinque Terre

35.18 K

Cinque Terre

0

ಸಂಬಂಧಿತ ಸುದ್ದಿ