ಗೋಕಾಕ್:ಲೈಂಗಿಕ ಕಾರ್ಯಕರ್ತೆಯರ ಆರೋಗ್ಯ ಮತ್ತು ಅವರ ಕಷ್ಟ-ನಷ್ಟಗಳನ್ನ ತಿಳಿದು ನೆರವಾಗಲು ಗೋಕಾಕ್‌ನಲ್ಲಿ ಒಂದು ಸಂಘ ಹುಟ್ಟಿಕೊಂಡಿದೆ. ಅದುವೇ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ. ಈ ಸಂಘಕ್ಕೆ ಸ್ವತಃ ಕಟ್ಟಡವೇ ಇರಲಿಲ್ಲ. ಆದರೆ ಈಗ ಅದು ಸಾಧ್ಯವಾಗಿದೆ. ಅದರ ಉದ್ಘಾಟನೆ ನಾಳೆ ಆಗ್ತಾಯಿದೆ.
ವಿಧಾಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಈ ಹೆಣ್ಣುಮಕ್ಕಳ ಕಷ್ಟಕ್ಕೆ ಸ್ಪಂದಿಸಿದರು. ತಮ್ಮ ಅನುದಾನದಲ್ಲಿಯೇ ದುಡ್ಡನ್ನುನೆರವು ನೀಡಿದರು.ಅದರ ಫಲವೇ ಈಗ ಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಸ್ವತಃ ಕಟ್ಟಡ ನಿರ್ಮಾಣವಾಗಿದೆ.
ಗೋಕಾಕ್ ನ ಸತೀಶ್ ನಗರದ 5ನೇ ಕ್ರಾಸ್‌ನಲ್ಲಿಯೇ ಸಂಘದ ಕಟ್ಟಡ ನಿರ್ಮಾಣಗೊಂಡಿದೆ. ಶಾಸಕ ಸತೀಶ್ ಜಾರಕಿಹೊಳೆ ನಾಳೆ ಈ ಕಟ್ಟಡವನ್ನ ಉದ್ಘಾಟಿಸಲಿದ್ದಾರೆ.
PublicNext
06/01/2022 07:45 pm