ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಜನ್ರು ರಸ್ತೆಗೆ ಇಳಿಯೋಕೆ ಭಯ ಪಡ್ತಾಯಿದ್ದಾರೆ. ಅದ್ರಲ್ಲೂ ವಾಹನ ಸವಾರರು ಲಕ್ಷ್ಮೇಶ್ವರ ರಸ್ತೆ ಅಂದ್ರೆ ಭಯ ಪಡ್ತಾಯಿದ್ದಾರೆ. ಹೆಜ್ಜೆ ಹಜ್ಜೆಗೂ ತಗ್ಗು ಗುಂಡಿಗಳದ್ದೇ ಸಾಮ್ರಾಜ್ಯವಾಗಿದೆ. ಅದೆಷ್ಟೋ ಜನ್ರು ಬಿದ್ದು ಎದ್ದಿದ್ದಾರೋ ಗೊತ್ತಿಲ್ಲ..
ಇತ್ತ ರಸ್ತೆ ಹದೆಗೆಟ್ಟು ಹಳ್ಳಹಿಡಿದಿವೆ.. ಈ ಬಗ್ಗೆ ಕೇಳೋರೆ ಇಲ್ಲದಂತಾಗಿದೆ. ಆದ್ರೆ ಅತ್ತ ಶಾಸಕ ರಾಮಣ್ಣ ಲಮಾಣಿಯವರು ತಮ್ಮ 71ನೇ ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ.. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ಆಗಮಿಸುತ್ತಾರೆಂದು ತಿಳಿದು ರಾತ್ರೋರಾತ್ರಿ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವಿಚಾರಕ್ಕೆ ಸ್ಥಳಿಯರು ಆಕ್ರೋಶಗೊಂಡು ಮುಖಂಡರು ಬಂದರೆ ಅಷ್ಟೇ ಇಂತಹ ಕಾರ್ಯಗಳು ನಡೆಯುತ್ತವೆ ಎಂದು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ.
ಹೀಗೆ ಪ್ರಮುಖ ರಸ್ತೆ, ಲಕ್ಷ್ಮೇಶ್ವರ ನಿಂದ ಸವಣೂರು, ಹುಬ್ಬಳ್ಳಿ ಹೋಗುವ ರಸ್ತೆಗಳು ನೋಡಿದ್ರೆ ರಸ್ತೆಯಲ್ಲಿ ಗುಂಡಿಗಳು ಇವೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದ್ದಾವೋ ಅನ್ನೋದು ಹುಡುಕಾಡೋದು ಕಷ್ಟವಾಗಿದೆ. ವಾಹನ ಸವಾರರು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರೌಂಡ್ ರಿಪೋರ್ಟ್. ಸುರೇಶ ಲಮಾಣಿ ಪಬ್ಲಿಕ್ ನೆಕ್ಸ್ಟ ಗದಗ
PublicNext
21/08/2022 10:19 pm