ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸದ್ಯ ಅಭಿವೃದ್ಧಿ ಪಥದಲ್ಲಿಯೇ ಸಾಗುತ್ತಿದೆ. ಈ ಅಭಿವೃದ್ಧಿಯ ಕೆಲಸಗಳ ಬಗ್ಗೆ ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವೀಡಿಯೋ ಸಮೇತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ, ನೋಡೋಣ.
ಅಭಿವೃದ್ಧಿಯ ಪಥದಲ್ಲಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ಹುಬ್ಬಳ್ಳಿ ನಗರದ ಚತುಷ್ಪಥ ಬೈಪಾಸ್ ರಸ್ತೆ, ರಾ.ಹೆ 218 ರಿಂದ ರಾ.ಹೆ 63ಕ್ಕೆ ಸುಲಭ ಸಂಪರ್ಕ ಮಾರ್ಗ ಕಲ್ಪಿಸುವ 20 ಕಿ.ಮೀ ರಸ್ತೆಯ ವಿಹಂಗಮ ನೋಟ.
260 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚತುಷ್ಪಥ ಬೈಪಾಸ್ ರಸ್ತೆಯು ನಗರದ ಸಂಚಾರ ದಟ್ಟಣೆ ನಿರ್ವಹಿಸಿದ್ದಲ್ಲದೆ ಜನರ ಸುಲಭ ಸಂಚಾರಕ್ಕೆ ಅನುಕೂಲವಾಗಿದೆ.
ಪ್ರಧಾನಮಂತ್ರಿ ಶ್ರೀ Narendra Modi ಅಭಿವೃದ್ಧಿ ಪರ ಯೋಜನೆಯಿಂದ ದೇಶದಲ್ಲಿ ರಸ್ತೆ ನಿರ್ಮಾಣ ಕಾರ್ಯ ವೇಗವಾಗಿ ನಡೆದಿದೆ ಮತ್ತು ಸಚಿವರಾದ ಶ್ರೀ Nitin Gadkari ಅವರು ಅಗತ್ಯ ಸಂಪನ್ಮೂಲ ಒದಗಿಸುವಲ್ಲಿ ನೆರವಾಗಿದ್ದಾರೆ. ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ನಿತಿನ್ ಗಡ್ಕರಿ ಅವರಿಗೆ ಅನಂತಾನಂತ ಧನ್ಯವಾದಗಳು.
PublicNext
25/06/2022 08:09 pm