ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇತ್ರದಾನಕ್ಕೆ ನೋಂದಾಯಿಸಿ, ಅಪ್ಪು ಭಾವಚಿತ್ರದೊಂದಿಗೆ ರಾಹುಲ್​ ಜತೆ ಫೋಟೋ ಕ್ಲಿಕ್ಕಿಸಿಕೊಂಡ ಯುವಕ-ಯುವತಿಯರು

ಮೈಸೂರು: ಅಭಿಮಾನಿಗಳ ಮನದಲ್ಲಿ ಅಪ್ಪು ನೆನಪು ಇನ್ನೂ ಹಸಿರಾಗಿಯೇ ಉಳಿದಿದೆ. ಇದಕ್ಕೆ ಪೂರಕವೆಂಬಂತೆ ಜಾತ್ರೆ, ಯಾತ್ರೆ, ಸಭೆ, ಸಮಾರಂಭಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತಿವೆ. ಇದೀಗ ಭಾರತ್ ಜೋಡೋ ಯಾತ್ರೆಯಲ್ಲೂ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗಿದೆ.

ಹೌದು.. ಪುನೀತ್ ರಾಜ್ ಕುಮಾರ್ ಅವರ ಉತ್ತೇಜನದಿಂದ ಅನೇಕರು ಅಂಗಾಗ ದಾನಕ್ಕೆ ಮುಂದಾಗಿದ್ದಾರೆ. 33 ಯುವಕ-ಯುವತಿಯರು ನೇತ್ರದಾನ ನೋಂದಣಿ ಮಾಡಿಸಿದ್ದಾರೆ. ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನೇತ್ರದಾನ ನೋಂದಾಣಿ ಮಾಡಿಸಿ ಪ್ರಮಾಣ ಪತ್ರಪಡೆದುಕೊಂಡಿದ್ದಾರೆ.

ನೇತ್ರದಾನ ಮಾಡಿ ಎಂದು ಹೇಳುತ್ತ ಪುನೀತ್ ಭಾವಚಿತ್ರ ಹಿಡಿದು ರಾಹುಲ್ ಗಾಂಧಿ ಅವರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡಿರುವುದು ವಿಶೇಷವಾಗಿದೆ. ನೇತ್ರದಾನ ನೋಂದಾಣಿ ಮಾಡಿಸಿದ ಮೂಲಕ ಮತ್ತಷ್ಟು ಜನರಿಗೆ ನೇತ್ರದಾನ ಮತ್ತು ಅಂಗಾಗ ದಾನಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು.

ನೇತ್ರದಾನಿಗಳು ರಾಹುಲ್​ ಗಾಂಧಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿರುವುದನ್ನು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Edited By : Abhishek Kamoji
PublicNext

PublicNext

12/10/2022 09:32 pm

Cinque Terre

72.63 K

Cinque Terre

0

ಸಂಬಂಧಿತ ಸುದ್ದಿ