ತಿರುವನಂತಪುರಂ: ‘ಭಾರತ್ ಜೋಡೋ ಯಾತ್ರೆʼ ವೇಳೆ ಜೊತೆಯಲ್ಲಿ ಸಾಗುತ್ತಿದ್ದ ಬಾಲಕಿಯ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರಳತೆ ಮೆರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಯಾತ್ರೆಯ 11ನೇ ದಿನದ ವೀಡಿಯೋವೊಂದರಲ್ಲಿ, ಬಾಲಕಿಯೊಬ್ಬಳಿಗೆ ರಾಹುಲ್ ಗಾಂಧಿ ಪಾದರಕ್ಷೆ ತೊಡಿಸುತ್ತಿರುವ ದೃಶ್ಯ ಕಂಡುಬಂದಿದೆ.
ಈ ವೀಡಿಯೋವನ್ನು ಮಹಿಳಾ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ʼಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆʼ ಎಂದು ಡಿಸೋಜಾ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ʻಮಾನವೀಯ ಸ್ಪರ್ಶದ ನಾಯಕʼ, ʼಹೃದಯವಂತʼ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
20/09/2022 06:10 pm