ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಮನೆ ಕಳೆದುಕೊಂಡವರಿಗೆ ಆರ್ಥಿಕ ನೆರವು ನೀಡಿದ ಶಾಸಕ ಡಿ.ಸಿ.ಗೌರಿ ಶಂಕರ್

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರ ಗೂಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹೆತ್ತೇನಹಳ್ಳಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಹಲವು ಮನೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಶಾಸಕರಾದ ಡಿ ಸಿ ಗೌರಿ ಶಂಕರ್ ಮನೆ ಕಳೆದುಕೊಂಡವರಿಗೆ ಧನಸಹಾಯ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೆತ್ತೇನಹಳ್ಳಿ ಗ್ರಾಮದಲ್ಲಿ 7 ಮನೆಗಳಿಗೆ ಹಾನಿಯಾಗಿತ್ತು. ಶಾಸಕರಾದ ಡಿ ಸಿ ಗೌರಿ ಶಂಕರ್ ಅವರಿಗೆ ವಿಚಾರ ತಿಳಿದ ತಕ್ಷಣ ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಜಿ.ಪಾಲನೇತ್ರಯ್ಯ ಅವರಿಗೆ, ಹೆತ್ತೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮನೆ ಹಾನಿಗೊಳಗಾಗಿರುವವರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪಾಲನೇತ್ರಯ್ಯ ಅವರು ಶಾಸಕರ ಆದೇಶದಂತೆ ಹೆತ್ತೇನಹಳ್ಳಿ ಗ್ರಾಮದಲ್ಲಿ ಮನೆ ಕಳೆದುಕೊಂಡವರ ಪ್ರತಿ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿ ಮನೆ ಹಾನಿಗೊಳಗಾದ 7 ಕುಟುಂಬಗಳಿಗೆ 60,000 ರೂಪಾಯಿ ಹಣ ಸಹಾಯ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ವೈಯಕ್ತಿಕ ಹಣದಲ್ಲಿ ಜೆಂಕ್ ಶೀಟ್ಸ್ ಹಾಗೂ M-sand, ಸಿಮೆಂಟ್ ನೀಡುವುದಾಗಿ ಸಂತ್ರಸ್ತರಿಗೆ ತಿಳಿಸಿ ಪಾಲನೇತ್ರಯ್ಯ ಧೈರ್ಯ ತುಂಬಿದ್ರು.

Edited By : Somashekar
PublicNext

PublicNext

06/08/2022 06:14 pm

Cinque Terre

72.94 K

Cinque Terre

2

ಸಂಬಂಧಿತ ಸುದ್ದಿ