ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾವನ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ವಿನಯ್ ಕುಲಕರ್ಣಿ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಗಂಗಣ್ಣ ಶಿಂತ್ರಿ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಬೆಳಗಾವಿ ಜಿಲ್ಲೆ ಸವದತ್ರಿ ಸಮೀಪದ ಯಡ್ರಾಮಿ ಗ್ರಾಮದ ತೋಟದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು. ಕೋರ್ಟ್ ಅನುಮತಿ ಮೇರೆಗೆ ಅಂತ್ಯಕ್ತಿಯೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ಥಳದಲ್ಲಿದ್ದ ತಮ್ಮ ಪುತ್ರ ಹೇಮಂತ್ ಹಾಗೂ ಪುತ್ರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟರು.

ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿದ್ದ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲಾ ಸಿಬಿಐ ವಿಶೇಷ ನ್ಯಾಯಾಲಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಮಾವನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಸ್ಥಳದಲ್ಲಿದ್ದ ಮಕ್ಕಳ ಮುಖ ನೋಡಿದ ಕೂಡಲೇ ವಿನಯ್ ಕುಲಕರ್ಣಿ ಭಾವುಕರಾದರು. ನಂತರ ಕುಟುಂಬಸ್ಥರಿಗೆ ಸಮಾಧಾನ ಹೇಳಿ ಅಲ್ಲಿಂದ ತೆರಳಿದರು.

ವಿನಯ್ ಕುಲಕರ್ಣಿ ಅವರು ಮನೆಯಿಂದ ಹೊರಬರುತ್ತಲೇ ಸ್ಥಳದಲ್ಲಿ ಜಮಾಯಿಸಿದ್ದ ಜನ ವಿನಯ್ ಅವರತ್ತ ಕೈ ಬೀಸಿದರು. ಇದರಿಂದ ಕೆಲಕಾಲ ನೂಕುನುಗ್ಗಲು ಉಂಟಾಗಿತ್ತು.

Edited By : Nagaraj Tulugeri
PublicNext

PublicNext

24/01/2021 11:08 pm

Cinque Terre

125.32 K

Cinque Terre

9

ಸಂಬಂಧಿತ ಸುದ್ದಿ