ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ವಿಚಾರದಲ್ಲಿ ಹೆಣ್ಮಕ್ಕಳನ್ನು ಟಾರ್ಗೆಟ್ ಮಾಡ್ಬೇಡಿ, ಬದುಕಲು ಬಿಡಿ: ವಿಶ್ವಸುಂದರಿ ಮನವಿ

ಮುಂಬೈ: ಹಿಜಾಬ್ ವಿಚಾರದಲ್ಲಿ ಹೆಣ್ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು 2021ನೇ ಸಾಲಿನ ವಿಶ್ವಸುಂದರಿ ಹರ್ನಾಜ್ ಸಂಧು ಅಸಮಾಧಾನಿತರಾಗಿದ್ದಾರೆ.

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನೀವೇಕೆ ಎಲ್ಲ ವಿಚಾರಗಳಲ್ಲೂ ಹೆಣ್ಣುಮಕ್ಕಳನ್ನೇ ಗುರಿಯಾಗಿಸುತ್ತೀರಿ? ಸದ್ಯ ಹಿಜಾಬ್ ವಿಚಾರದಲ್ಲೂ ಹೆಣ್ಣುಮಕ್ಕಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಈಗಲೂ ಕೂಡ ನೀವು ನನ್ನನ್ನೇ ಟಾರ್ಗೆಟ್ ಮಾಡಿ ಈ ಪ್ರಶ್ನೆ ಕೇಳಿದ್ದೀರಿ ಅಲ್ಲವೇ ಎಂದು ಸರ್ನಾಜ್ ಮರುಪ್ರಶ್ನೆ ಹಾಕಿದ್ದಾರೆ.

ಎಲ್ಲ ವಿಚಾರದಲ್ಲೂ ಮಹಿಳೆಯನ್ನು ಗುರಿಯಾಗಿಸುವ ಪ್ರವೃತ್ತಿ ನಿಲ್ಲಬೇಕು. ಈ ಮನೋಭಾವ ತೊಲಗಬೇಕು. ಹೆಣ್ಣುಮಕ್ಕಳನ್ನು ದಯವಿಟ್ಟು ಅವರ ಪಾಡಿಗೆ ಬದುಕಲು ಬಿಡಿ ಎಂದು ವಿಶ್ವಸುಂದರಿ ಹರ್ನಾಜ್ ಸಂಧು ಕೋರಿದ್ದಾರೆ.

Edited By : Nagaraj Tulugeri
PublicNext

PublicNext

28/03/2022 06:55 pm

Cinque Terre

61.04 K

Cinque Terre

29