ಮೈಸೂರು: ಮೇಯರ್ ಚುನಾವಣೆಗೆ ಮತ ಹಾಕಲು ಆ್ಯಂಬುಲೆನ್ಸ್ ಮೂಲಕ ಬಿಜೆಪಿ ಸದಸ್ಯೆ ಪಾಲಿಕೆಗೆ ಆಗಮಿಸಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಶ್ವಿನಿ ಶರತ್ ನಗರದ ಖಾಸಗಿ ಆಸ್ಪತ್ರೆಯಿಂದ ನೇರವಾಗಿ ಪಾಲಿಕೆಗೆ ಆಗಮಿಸಿದ್ರು.
ಪಕ್ಷದಿಂದ ವಿಪ್ ಜಾರಿ ಮಾಡಿರುವ ಕಾರಣ ಮತದಾನಕ್ಕೆ ಕಡ್ಡಾಯವಾಗಿ ಬರಬೇಕೆಂದು ಎಲ್ಲರಿಗೂ ಸೂಚನೆ ನೀಡಿದ್ದು, ಅದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಆ್ಯಂಬುಲೆನ್ಸ್ನಲ್ಲೇ ಪಾಲಿಕೆಗೆ ಆಗಮಿಸಿ ಮತ ಚಲಾಯಿಸಿದ್ದು, ವಿಭಿನ್ನವಾಗಿತ್ತು.
PublicNext
06/09/2022 03:21 pm