ಬೆಂಗಳೂರು: ಬೂಸ್ಟರ್ ಡೋಸ್ ಗೆ ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಟ್ಟಿಗೆ ನಡೆಸೋ ಸಭೆಯ ಬಳಿಕವೇ ತೀರ್ಮಾನಿಸಲಾಗುವುದು ಎಂದು ಈಗ
ಹೇಳಿಕೆ ಕೊಟ್ಟಿದ್ದಾರೆ.
ಬೂಸ್ಟರ್ ಡೋಸ್ ಅನ್ನ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿಯೇ ನೀಡಲಾಗುತ್ತದೆ. ಈಗಾಗಲೇ 2 ಡೋಸ್ ಶೇಕಡ 98 ರಷ್ಟು ಹಾಗೂ 60 ವಯಸ್ಸು ಮೇಲ್ಪಟ್ಟವರಿಗೆ ಮೂರನೇ ಡೋಸ್ ನೀಡಲಾಗಿದೆ. ಅದು ಶೇಕಡ 54 ರಷ್ಟು ಆಗಿದೆ ಅಂತಲೇ ಸುಧಾಕರ್ ವಿವರಿಸಿದ್ದಾರೆ.
ಕಳೆದ ಒಂದು ವಾರದಿಂದ ಕೋವಿಡ್ ಕೇಸ್ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ನಾಳೆ ಪ್ರಧಾನಿ ಮೋದಿ ಅವರ ಜೊತೆಗೆ ಸಭೆ ಕೂಡ ಇದೆ. ಈ ಸಭೆಯಲ್ಲಿ ಆಗೋ ಚರ್ಚೆ ಮತ್ತು ತೀರ್ಮಾನಗಳ ಬಳಿಕವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.
PublicNext
26/04/2022 03:55 pm