ಪುಣೆ: ಮಹಾರಾಷ್ಟ್ರದ 10ಕ್ಕೂ ಅಧಿಕ ಮಂತ್ರಿಗಳು ಹಾಗೂ 20 ಶಾಸಕರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿರುವುದಾಗಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ನಿರ್ಬಂಧಗಳನ್ನ ಜಾರಿಗೊಳಿಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ 24ಗಂಟೆಗಳ ಅವಧಿಯಲ್ಲಿ 8,067 ಕೋವಿಡ್ ಪ್ರಕರಣಗಳು ದಾಖಲಾದ ಬಳಿಕ ಈ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ. ನಾವು ಇತ್ತೀಚೆಗೆ ವಿಧಾನಸಭೆ ಕಲಾಪವನ್ನು ಕೂಡಾ ಕಡಿತ ಮಾಡಿದ್ದೇವೆ. ಈವರೆಗೆ ರಾಜ್ಯದ ಹತ್ತಕ್ಕೂ ಅಧಿಕ ಸಚಿವರುಗಳು ಹಾಗೂ 20ಕ್ಕೂ ಅಧಿಕ ಶಾಸಕರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿಸಿದರು.
PublicNext
01/01/2022 08:07 pm