ನವದೆಹಲಿ: ಭಾರತೀಯರು ಸಂಪೂರ್ಣ ಕೋವಿಡ್ ಲಸಿಕೆ ಪಡೆದಿದ್ದರೂ ಬ್ರಿಟನ್‌ನಲ್ಲಿ 10 ದಿನ ಕ್ವಾರಂಟೈನ್‌ನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಬ್ರಿಟನ್‌ನ ಸರ್ಕಾರದ ಹೊಸ ಪ್ರಯಾಣ ಮಾರ್ಗಸೂಚಿಗೆ ಆಕ್ಷೇಪ ವ್ಯಕ್ತಪಡಿಸಿರುವ ತಿರುವನಂತಪುರಂ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಕೇಂಬ್ರಿಡ್ಜ್ ಯೂನಿಯನ್‌ನಲ್ಲಿನ ಚರ್ಚೆಯಿಂದ ಹೊರಬಂದಿದ್ದಾರೆ. ಜೊತೆಗೆ ಅವರ ಪುಸ್ತಕ 'ದಿ ಬ್ಯಾಟಲ್ ಆಫ್ ಬಿಲೋಂಗ್'ನ ಯುಕೆ ಆವೃತ್ತಿಯ ಬಿಡುಗಡೆ ಸಮಾರಂಭಗಳಿಂದ ಹಿಂದೆ ಸರಿದಿದ್ದಾರೆ.
ಬ್ರಿಟನ್‌ನ ಸುದ್ದಿ ವಿಶ್ಲೇಷಕ ಅಲೆಕ್ಸ್ ಮಚೆರಾಸ್ ಸೆ. 18ರಂದು ಟ್ವೀಟ್ ಮಾಡಿ, 'ಬ್ರಿಟನ್ ಸರ್ಕಾರವು ಇಂದು ರಾತ್ರಿ ಆಫ್ರಿಕಾ, ಅಥವಾ ದಕ್ಷಿಣ ಅಮೆರಿಕ, ಯುಎಇ, ಭಾರತ, ಟರ್ಕಿ, ಜೋರ್ಡಾನ್, ಥೈಲ್ಯಾಂಡ್, ರಷ್ಯಾ ಸೇರಿದಂತೆ ದೇಶಗಳಿಗೆ ಲಸಿಕೆ ಹಾಕಿದ್ದರೆ ಅದನ್ನು ಲಸಿಕೆ ಹಾಕಿಲ್ಲ ಎಂದು ಪರಿಗಣಿಸಲಾಗುತ್ತದೆ. ಅವರು ಲಸಿಕೆ ಹಾಕದ ನಿಯಮಗಳನ್ನು ಅನುಸರಿಸಬೇಕು 10 ದಿನಗಳ ಹೋಮ್ ಕ್ವಾರಂಟೈನ್ ಮತ್ತು ಪರೀಕ್ಷೆಗಳಿಗೊಳಪಡಬೇಕು' ಎಂದು ಬರೆದುಕೊಂಡಿದ್ದರು.
ಅಲೆಕ್ಸ್ ಮಚೆರಾಸ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಶಶಿ ತರೂರ್, "ಈ ಕಾರಣದಿಂದಾಗಿ ನಾನು (ಕೇಂಬ್ರಿಡ್ಜ್ ಯೂನಿಯನ್) @cambridgeunion ನಲ್ಲಿ ನಡೆದ ಚರ್ಚೆಯಿಂದ ಹೊರಬಂದಿದ್ದೇನೆ. ಜೊತೆಗೆ ನನ್ನ ಪುಸ್ತಕದ #TheBattleOfBelonging ನ ಯುಕೆ ಆವೃತ್ತಿಯ ಬಿಡುಗಡೆ ಕಾರ್ಯಕ್ರಮಗಳಿಂದ ಹೊರಬಂದಿದ್ದೇನೆ (ಅಲ್ಲಿ #TheStruggleForIndiasSoul ಎಂದು ಪ್ರಕಟಿಸಲಾಗಿದೆ). ಸಂಪೂರ್ಣ ಲಸಿಕೆ ಹಾಕಿದ ಭಾರತೀಯರನ್ನು ಕ್ವಾರಂಟೈನ್‌ನಲ್ಲಿರುವುದು ಅಪರಾಧ. ಬ್ರಿಟಿಷರು ಪರಿಶೀಲಿಸುತ್ತಿದ್ದಾರೆ! ಎಂದು ತಿಳಿಸಿದ್ದಾರೆ.
PublicNext
21/09/2021 11:49 am