ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತಕ್ಕಿಂತ ಪಾಕ್‌, ಅಘ್ಘಾನಿಸ್ತಾನವೇ ಕೊರೊನಾವನ್ನ ಚೆನ್ನಾಗಿ ನಿಭಾಯಿಸಿವೆ: ರಾಹುಲ್ ಗಾಂಧಿ

ನವದೆಹಲಿ: ಭಾರತಕ್ಕಿಂತ ಪಾಕಿಸ್ತಾನ ಹಾಗೂ ಅಘ್ಘಾನಿಸ್ತಾನವೇ ಕೊರೊನಾವನ್ನ ಚೆನ್ನಾಗಿ ನಿಭಾಯಿಸಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಕೊರೊನಾ ನಿರ್ವಹಣೆ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಬಾಂಗ್ಲಾದೇಶ, ನೇಪಾಳ, ಚೀನಾ ಸೇರಿದಂತೆ 9 ದೇಶಗಳ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಅಭಿವೃದ್ಧಿ ದರ ಚಾರ್ಟ್ ಅನ್ನು ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ 'ಇದು ಬಿಜೆಪಿ ಸರ್ಕಾರ ಮತ್ತೊಂದು ಸಾಧನೆಯಾಗಿದೆ. ಭಾರತಕ್ಕಿಂತ ಪಾಕಿಸ್ತಾನ ಮತ್ತು ಅಘ್ಘಾನಿಸ್ತಾನವೇ ಕೊರೊನಾವನ್ನು ಚೆನ್ನಾಗಿ ನಿಭಾಯಿಸಿವೆ' ಎಂದು ಬರೆದುಕೊಂಡಿದ್ದಾರೆ.

ಕೋವಿಡ್-19 ಸಾಂಕ್ರಮಿಕದಿಂದಾಗಿ ಭಾರತದ ಆರ್ಥಿಕತೆ ಕುಸಿದಿದ್ದು, ಈ ವರ್ಷ ಶೇ.10.3 ರಷ್ಟು ಭಾರೀ ಪ್ರಮಾಣದಲ್ಲಿ ಭಾರತದ ಆರ್ಥಿಕತೆ ಸಂಕುಚಿತಗೊಳ್ಳುವ ನಿರೀಕ್ಷೆಯಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಹೇಳಿದೆ. ಭಾರತದ ಆರ್ಥಿಕತೆ ನಿಶ್ಚಲವೇನಲ್ಲ ಎಂದು ಇದೇ ಐಎಂಎಫ್​ ಇತ್ತೀಚಿನ “ವರ್ಲ್ಡ್​ ಎಕನಾಮಿಕ್​ ಔಟ್​ಲುಕ್”​ ವರದಿಯಲ್ಲಿ ಹೇಳಿದೆ.

Edited By : Vijay Kumar
PublicNext

PublicNext

16/10/2020 02:21 pm

Cinque Terre

118.44 K

Cinque Terre

57

ಸಂಬಂಧಿತ ಸುದ್ದಿ