ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಸಿಬಿಐ ದಾಳಿಯಿಂದ ನಾವು ಹೆದರಿಲ್ಲ, ಹೆದರೋದೂ ಇಲ್ಲ: ರಾಬ್ಡಿ ದೇವಿ

ಪಾಟ್ನಾ: ಬಿಹಾರದ ಜನತೆ ನಮ್ಮೊಂದಿಗಿದ್ದಾರೆ‌. ನಾವು ಸಿಬಿಐ ದಾಳಿಗೆ ಯಾವ ಕಾರಣಕ್ಕೂ ಭಯಪಡಲಾರೆವು. ಹಿಂದೆ ಕೂಡ ಭಯಪಟ್ಟಿಲ್ಲ ಎಂದು ಬಿಹಾರದ ಮಾಜಿ ಸಿಎಂ ಹಾಗೂ ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ಹೇಳಿದ್ದಾರೆ.

ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಹಾರದದಲ್ಲಿ ನಮ್ಮದೇ ಸರಕಾರ ಇದೆ. ಜನ ನಮ್ಮೊಂದಿಗಿದ್ದಾರೆ‌. ನಿತೀಶ್‌ಕುಮಾರ್ ನೇತೃತ್ವದಲ್ಲಿ ಬಿಜೆಪಿಯನ್ನು ಹೊರಗಿಟ್ಟು ಹೊಸ ಸರಕಾರ ರಚನೆಯಾಗಿದೆ‌. ಹೀಗಾಗಿ ಅವರಿಗೆ (ಕೇಂದ್ರ ಸರಕಾರ) ನಡುಕ ಹುಟ್ಟಿದೆ. ಹೀಗಾಗಿ ನಮ್ಮನ್ನು ಹೆದರಿಸಲು ಸಿಬಿಐ ದಾಳಿ ನಡೆಸಿದ್ದಾರೆ. ಆದರೆ ನಾವು ಹೆದರಿಲ್ಲ. ಏಕೆಂದರೆ ಇದು ನಮಗೆ ಮೊದಲ ಬಾರಿ ಏನಲ್ಲ ಎಂದು ರಾಬ್ಡಿ ದೇವಿ ಹೇಳಿದ್ದಾರೆ

Edited By : Nagaraj Tulugeri
PublicNext

PublicNext

24/08/2022 01:59 pm

Cinque Terre

39.39 K

Cinque Terre

8

ಸಂಬಂಧಿತ ಸುದ್ದಿ