ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ನಾನು ಬದುಕಿರುವವರೆಗೂ ಭ್ರಷ್ಟಾಚಾರ ನಡೆಸಲ್ಲ:ಕೋಡಿಹಳ್ಳಿ ಚಂದ್ರಶೇಖರ್

ದಾವಣಗೆರೆ: ನಾನು ಬದುಕಿರುವವರೆಗೂ ಭ್ರಷ್ಟಾಚಾರ ನಡೆಸಲ್ಲ. ಈ ಹಿಂದೆಯೂ ಮಾಡಿಲ್ಲ. ಆದ್ರೆ ಕೆಲವರು ಪಿತೂರಿ ನಡೆಸಿ ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿವಾದಿತ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೆಲ ರೈತ ಸಂಘದ ಮುಖಂಡರು ಪಕ್ಷಗಳು ಹಾಗೂ ಸರ್ಕಾರದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. 25 ಕ್ಕೂ ಹೆಚ್ಚು ರೈತ ಸಂಘಟನೆಗಳು ಹಾಗೂ ಇದರ ಹೆಸರಿನಲ್ಲಿ 25 ಎನ್.ಜಿ.ಒ.ಗಳಿವೆ. ನಾನು 42 ವರ್ಷಗಳಿಂದಲೂ ಚಳವಳಿಗಾರನಾಗಿ ಸಕ್ರಿಯನಾಗಿದ್ದೇನೆ. ನಮಗೂ ಜವಾಬ್ದಾರಿ ಇದೆ. ಸಂಘವನ್ನು‌ ಮುನ್ನೆಡೆಸಿಕೊಂಡು ಹೋಗುವ ಶಕ್ತಿ ಇದೆ ಎಂದು ಹೇಳಿದರು.

ನಾನು ಐದು ವರ್ಷ ಇಲ್ಲವೇ ಹತ್ತು ವರ್ಷ ಚಳವಳಿಯಿಂದ ದೂರ ಇದ್ದು, ವೈಯಕ್ತಿಕ ಕೆಲಸ ಮುಗಿಸಿಕೊಂಡು ಮತ್ತೆ ಬಂದವನಲ್ಲ. ನಾಲ್ಕು ದಶಕಗಳಿಂದಲೂ ರೈತ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಕಾರ್ಯಕಾರಿ ಸಮಿತಿ ನಮ್ಮದಿರುವಾಗ ನನ್ನನ್ನು ಕಿತ್ತು ಹಾಕುವ ಪ್ರಶ್ನೆಯೇ ಉದ್ಭವಿಸದು ಎಂದು ಸ್ಪಷ್ಟಪಡಿಸಿದರು.

ನಾನು ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಲ್ಲ.‌ ನನ್ನ ಮೇಲೆ ಆರೋಪ ಕೇಳಿ ಬಂದಾಗ ಸ್ಪಷ್ಟನೆ ನೀಡಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

Edited By : Somashekar
PublicNext

PublicNext

20/07/2022 04:52 pm

Cinque Terre

50.01 K

Cinque Terre

8

ಸಂಬಂಧಿತ ಸುದ್ದಿ