ಸುಳ್ಯ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರು ಇಂದು ಜು.12 ರಿಂದ ದ.ಕ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅವರು ಇಂದು ಮಧ್ಯಾಹ್ನ 2.30 ಕ್ಕೆ ಕೊಡಗು ಜಿಲ್ಲೆಯ ಮಡಿಕೇರಿಯಿಂದ ನಿರ್ಗಮಿಸಿ, ರಸ್ತೆ ಮೂಲಕ ಮಾರ್ಗವಾಗಿ ಸುಳ್ಯ ತಾಲೂಕಿಗೆ ಆಗಮಿಸಿ ಮಳೆಯಿಂದ ಹಾನಿಗೊಳಗಾದ ಸುಳ್ಯದ ಗಡಿ ಪ್ರದೇಶ ಸಂಪಾಜೆಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ವತಿಯಿಂದ ಸ್ವಾಗತ ನೀಡಲಿದ್ದು, ಭೂಕಂಪನದ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಲಿದ್ದಾರೆ. ನಂತರದಲ್ಲಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸಂಗಮ ಸ್ಥಳದ ನದಿ ಮಟ್ಟದ ವೀಕ್ಷಣೆ ಮತ್ತು ಬೆಳೆಹಾನಿ ಪರಿಶೀಲನೆ ಮಾಡಲಿದ್ದಾರೆ.ನಂತರ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಭೂಕುಸಿತದಲ್ಲಿ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ಚೆಕ್ ವಿತರಣೆ ನಂತರ ಉಳ್ಳಾಲ ತಾಲೂಕಿನ ಕಡಲ್ಕೋರೆತದ ಪ್ರದೇಶಗಳಿಗೆ ಭೇಟಿ,ನಂತರ ಮುಲ್ಕಿ ತಾಲೂಕಿನ ಬೆಳೆಹಾನಿ ಪ್ರದೇಶ ಹಾಗೂ ನದಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡುವರು.
ರಾತ್ರಿ 7.30 ಕ್ಕೆ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಉಡುಪಿಗೆ ತೆರಳುವರು .ಜು .13 ರ ಬುಧವಾರ ಸಂಜೆ 6.30 ಕ್ಕೆ ಉಡುಪಿಯಿಂದ ರಸ್ತೆ ಮಾರ್ಗವಾಗಿ ಹೊರಟು ರಾತ್ರಿ 7.30 ಕ್ಕೆ ಮಂಗಳೂರಿನ ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ , 7.45 ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
PublicNext
12/07/2022 08:14 am