ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂತನ ಆಯುಕ್ತರ ಆಗಮನ ಆಗಿದೆ. ಹಿಂದೆ ಆಯುಕ್ತರಾಗಿದ್ದ ಗೌರವ್ ಗುಪ್ತಾ ಅವರ ಸ್ಥಾನಕ್ಕೆ ತುಷಾರ್ ಗಿರಿನಾಥ್ ಬಂದಿದ್ದಾರೆ.
ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದ ಸಂದರ್ಭ ಬಿಬಿಎಂಪಿ ಚುನಾವಣೆ ಎನ್ನುವುದೇ ಮರೀಚಿಕೆಯಾಗಿರುವ ಹೊತ್ತಿನಲ್ಲಿ ಅಧಿಕಾರ ವಹಿಸಿಕೊಂಡಿರುವ ಗಿರಿನಾಥ್ ಅವರ ಎದುರಿಗಿವೆ ಸಮಸ್ಯೆಗಳ ಆಗರ. ಆಡಳಿತ ಯಂತ್ರಕ್ಕೆ ಜಡ್ಡುಗಟ್ಟಿರುವ ವಾತಾವರಣ ಇರುವ ಹೊತ್ತಿನಲ್ಲಿ ಅಧಿಕಾರ ವಹಿಸಿಕೊಂಡಿರುವ ಗಿರಿನಾಥ್ ಅವರಿಗೆ ಸವಾಲುಗಳ ಮೇಲೆ ಸವಾಲು ಎದುರಾಗಲಿವೆ. ಅದೆಲ್ಲವನ್ನೂ ಮೆಟ್ಟಿ ನಿಂತು, ಜನಸ್ನೇಹಿ ಆಡಳಿತ ನೀಡುವಲ್ಲಿ ತುಷಾರ್ ಗಿರಿನಾಥ್ ಸಫಲರಾಗುವರೇ!? ಕಾಲವೇ ಉತ್ತರಿಸಬೇಕಿದೆ.
PublicNext
06/05/2022 09:05 pm