ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿವ್ಯಾ ಹಾಗರಗಿ ಬಂಧನ ಖಚಿತ ಪಡಿಸಿದ ಗೃಹಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು : ಪಿಎಸ್ಐ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಪುಣೆಯಲ್ಲಿ ಬಂಧಿಸಿರುವುದಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಖಚಿತ ಪಡಿಸಿದ್ದಾರೆ. ಆರ್ ಟಿ ನಗರದ ತಮ್ಮ ನಿವಾಸದ ಬಳಿ ವರದಿಗಾರರಿಗೆ ಮಾಹಿತಿ ನೀಡಿದ ಸಚಿವರು, ಹಾಗರಗಿ ಬಂಧನದಿಂದಾಗಿ ಇಡೀ ಪ್ರಕಣದಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ. ಯಾವ ಯಾವ ಸೆಂಟರ್ ಗಳಲ್ಲಿ ಅಕ್ರಮ ನಡೆದಿದೆ. ಎನ್ನುವುದೆಲ್ಲಾ ಹೊರಬರಲಿದೆ.

ಬ್ಲೂಟೂತ್, ಓ ಎಂ ಆರ್ ಶೀಟ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಕ್ರಮವನ್ನು ಎಸಗಲಾಗಿದೆ. ಎಂದರು.ಇವರೆಲ್ಲಾ ಸೇರಿಕೊಂಡು ನಿಜವಾಗಿ ಕಷ್ಟಪಟ್ಟು ಓದಿ ಪರೀಕ್ಷೆ ಬರೆದವರ ಬಾಯಿಗೆ ಮಣ್ಣು ಹಾಕಿದ್ದಾರೆ ಎಂದು ಹೇಳಿದ್ರು. ಇನ್ನು ಮುಂದೆ ಅಕ್ರಮ ತಡೆಯಲು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಇದಕ್ಕೆ ಹೇಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದರು.

Edited By : Nirmala Aralikatti
PublicNext

PublicNext

29/04/2022 11:46 am

Cinque Terre

33.87 K

Cinque Terre

0

ಸಂಬಂಧಿತ ಸುದ್ದಿ