ನವದೆಹಲಿ: ನವದೆಹಲಿಯಲ್ಲಿ ನಿರ್ಮಿಸಲಾಗಿರುವ ಪ್ರಧಾನ ಮಂತ್ರಿ ಸಂಗ್ರಹಾಲಯವನ್ನು ಗುರುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
ನಂತರ ಮಾತನಾಡಿದ ಅವರು, ದೇಶವು 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ ಈ ವಸ್ತು ಸಂಗ್ರಹಲಾಯವು ಸ್ಫೂರ್ತಿ ನೀಡುವ ತಾಣವಾಗಿದೆ. ದೇಶದ ಎಲ್ಲ ಪ್ರಧಾನಿಗಳ ಹಾಗೂ ಸರ್ಕಾರಗಳ ಪರಂಪರೆಯ ಜೀವಂತ ಸಂಕೇತವಾಗಿದೆ ಎಂದಿದ್ದಾರೆ.
ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಆಶಯ, ಗುರಿಗಳ ಈಡೇರಿಕೆಗೆ ದೇಶದ ಎಲ್ಲ ಪ್ರಧಾನಿಗಳು ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಕೊಡುಗೆಗಳ ಕುರಿತು ಸಮಗ್ರ ಮಾಹಿತಿಯನ್ನು ಪ್ರಧಾನ ಮಂತ್ರಿಗಳ ಸಂಗ್ರಹಾಲಯ ಒಳಗೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
PublicNext
14/04/2022 08:01 pm