ಬೆಂಗಳೂರು: ಮಹಾನಗರದಲ್ಲಿ ಅನಧಿಕೃತವಾಗಿ ನಿರ್ಮಿಸಿದ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅನಧಿಕೃತ ದೇಗುಲ, ಪ್ರಾರ್ಥನಾ ಮಂದಿರಗಳ ಪಟ್ಟಿ ಸಿದ್ಧ ಪಡಿಸಿದ್ದು, ಒಟ್ಟು 456 ಅನಧಿಕೃತ ಪ್ರಾರ್ಥನಾ ಮಂದಿರಗಳ ಪಟ್ಟಿ ಸಿದ್ದಪಡಿಸಿದೆ. ಇನ್ನು ಎರಡು ವರ್ಗಗಳಲ್ಲಿ ವಲಯವಾರು ಪಟ್ಟಿ ರೆಡಿ ಮಾಡಲಾಗಿದ್ದು, ಖಾಸಗಿ ಜಾಗ ಮತ್ತು ಸರ್ಕಾರಿ ಜಾಗದಲ್ಲಿ ತಲೆ ಎತ್ತಿರುವ ಪೂಜಾ ಸ್ಥಳಗಳು ಬಿಬಿಎಂಪಿ ಗುರುತಿಸಿದೆ.
ಹಾಗೆ ಸುಪ್ರೀಂಕೋರ್ಟ್ ಸೂಚನೆಯಂತೆ 2009ರ ಮೊದಲು ಮತ್ತು ನಂತರದ ಪಟ್ಟಿ ಸಿದ್ದವಾಗಿದ್ದು, 2009ಕ್ಕೂ ಮೊದಲು 5786 ಅನಧಿಕೃತ ಪೂಜಾ ಸ್ಥಳಗಳು ತಲೆ ಎತ್ತಿದೆ ಎಂದು ಗುರಿತಿಸಲಾಗಿದೆ. ಅದಲ್ಲದೆ 1870 ಪೂಜಾ ಸ್ಥಳಗಳು ಸರ್ಕಾರಿ ಭೂಮಿಯಲ್ಲಿ ಹಾಗೂ 3916 ದೇಗಲುಗಳು ಅನಧಿಕೃತವಾಗಿ ಖಾಸಗಿ ಭೂಮಿಯಲ್ಲಿ ತಲೆ ಎತ್ತಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ 132 ಪೂಜಾ ಸ್ಥಳಗಳಿಗೆ ಪರ್ಯಾಯ ಜಾಗ ನೀಡಿ ಸ್ಥಳಾಂತರಿಸಲಾಗಿದ್ದು, 265 ಪೂಜಾ ಸ್ಥಳಗಳನ್ನ ತೆರವು ಗೊಳಿಸಲು ಬಿಬಿಎಂಪಿಯಿಂದ ಗುರುತಿಸಲಾಗಿದೆ.
PublicNext
15/09/2021 12:28 pm