ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

75ನೇ ಸ್ವಾತಂತ್ರ್ಯೋತ್ಸವ: ಸಿಎಂ ಸೇರಿದಂತೆ ರಾಜ್ಯದ ವಿವಿಧ ಗಣ್ಯರಿಂದ ಶುಭಾಶಯ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ನಾಡಿನ ಜನರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ್ದಾರೆ.

ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, "ಸಮಸ್ತ ಭಾರತೀಯರಿಗೆ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವದ ಹಾರ್ದಿಕ ಶುಭಾಶಯಗಳು. ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ" ಎಂದು ತಿಳಿಸಿದ್ದಾರೆ.

"ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವು ನಮಗೆ ಯಾವುದೇ ಸವಾಲನ್ನು ಎದುರಿಸಲು ಪ್ರೇರಣೆ ನೀಡುವ ಜೊತೆಗೆ ಭವ್ಯ ರಾಷ್ಟ್ರನಿರ್ಮಾಣದ ಕರ್ತವ್ಯಗಳನ್ನೂ ನೆನಪಿಸುತ್ತದೆ. ಬನ್ನಿ, ನಾವೆಲ್ಲರೂ ಒಂದಾಗಿ ಸಮೃದ್ಧ, ಸಶಕ್ತ, ಶ್ರೇಷ್ಠ ಭಾರತಕ್ಕಾಗಿ ಒಂದಾಗಿ ಮುನ್ನಡೆಯೋಣ" ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಟ್ವೀಟ್‌ ಮಾಡಿದ್ದಾರೆ.

ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ ದೇವೇಗೌಡ ಅವರು ಟ್ವೀಟ್ ಮಾಡಿ, "ಸಮಸ್ತ ದೇಶವಾಸಿಗಳಿಗೆ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಈ ಪುಣ್ಯದಿನದಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ ಎಲ್ಲಾ ವೀರರನ್ನು ನೆನೆಯುತ್ತಾ, ಭಾರತ ಮಾತೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಪಣ ತೊಡೋಣ" ಎಂದು ಹೇಳಿದ್ದಾರೆ.

"ದೇಶದ ಸ್ವಾತಂತ್ರ್ಯ ಹಿರಿಯರ ಹೋರಾಟದ ಗಳಿಕೆ, ನಮ್ಮ ಸಂಪಾದನೆ ಅಲ್ಲ. ಈ ಸ್ವಾತಂತ್ರ್ಯವನ್ನು ಜತನದಲ್ಲಿ ಕಾಪಾಡಿ ಮುಂದಿನ ತಲೆಮಾರಿಗೆ ಬಳುವಳಿಯಾಗಿ ನೀಡುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯವನ್ನು ಸಂಭ್ರಮಿಸೋಣ, ಸ್ವಾತಂತ್ರ್ಯದ ದಮನವನ್ನು ಪ್ರತಿಭಟಿಸೋಣ. ಸ್ವಾತಂತ್ರ್ತೋತ್ಸವದ ಶುಭಾಶಯಗಳು" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ಹೇಳಿದ್ದಾರೆ.

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮಲ್ಲಿ ನಾನಾ ಜಾತಿ-ಧರ್ಮಗಳು, ವಿವಿಧ ಭಾಷೆಗಳು,ವಿಶಿಷ್ಟ ಜೀವನಶೈಲಿಗಳಂತಹ ಹಲವಾರು ವರ್ಗಗಳಿದ್ದರೂ, ನಮೆಲ್ಲರನ್ನು ಒಗ್ಗೂಡಿಸಲು ನಮ್ಮಲ್ಲಿರುವ ಭಾರತೀಯತೆಯ ಒಂದು ಅಂಶ ಸಾಕು. ಈ ಪುಣ್ಯದಿನದ ಹಿಂದಿರುವ ಅಸಂಖ್ಯಾತ ತ್ಯಾಗ ಮತ್ತು ಬಲಿದಾನಗಳನ್ನು ವಿಧೇಯತೆಯಿಂದ ಸ್ಮರಿಸುತ್ತಾ, ಬ್ರಿಟಿಷರ ನೂರಾರು ವರ್ಷಗಳ ಸರ್ವಾಧಿಕಾರದ ಸರಪಳಿಯನ್ನು ಕಿತ್ತೊಗೆದ ಈ ಅಮೃತ ಮಹೋತ್ಸವದಂದು ಭಾರತ ಮಾತೆಗೆ ಗರ್ವದಿಂದ ಗೌರವ ಸಲ್ಲಿಸೋಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Edited By : Vijay Kumar
PublicNext

PublicNext

15/08/2021 09:22 am

Cinque Terre

31.68 K

Cinque Terre

0

ಸಂಬಂಧಿತ ಸುದ್ದಿ