ಕೊರೊನಾ ಸಂಕಷ್ಟವನ್ನು ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿದೆ. ಹಿಂದೆಂದೂ ಕಾಣದ ಪರಿಸ್ಥಿತಿಯ ಮಧ್ಯೆಯೇ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಬಜೆಟ್ ಪ್ರಮುಖ ಅಂಶಗಳು ಇಂತಿವೆ:
* ಕೊರೊನಾ ಪರಿಹಾರಕ್ಕೆ 27 ಲಕ್ಷ ಕೋಟಿ ರೂ. ವಿನಿಯೋಗ
* ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 27.1 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ
* ಕೊರೊನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲು. ಇನ್ನೂ ಹೆಚ್ಚಿನ ಹಣ ಮೀಸಲಿಡಲು ಸರ್ಕಾರ ಸಿದ್ಧವಿದೆ
* ಆರೋಗ್ಯ ವಲಯಕ್ಕೆ ಮುಂದಿನ 6 ವರ್ಷದಲ್ಲಿ 64,180 ಕೋಟಿ
* ನಗರ ಸ್ವಚ್ಛ ಅಭಿಯಾನಕ್ಕೆ 1.41 ಲಕ್ಷ ಕೋಟಿ ರೂ ಘೋಷಣೆ
* 500 ನಗರಗಳನ್ನು ಅಮೃತ ನಗರಗಳೆಂದು ಘೋಷಣೆ
* ಇದರಲ್ಲಿ ಕೇರಳಕ್ಕೆ 55 ಸಾವಿರ ಕೋಟಿ, ಪಶ್ಚಿಮ ಬಂಗಾಳಕ್ಕೆ 25 ಸಾವಿರ ಕೋಟಿ, ಅಸ್ಸಾಂಗೆ 34 ಸಾವಿರ ಕೋಟಿ ರೂ. ಅನುದಾನ.
* ಬೆಂಗಳೂರಿನಲ್ಲಿ 58.19 ಕಿ.ಮೀ. ಮೆಟ್ರೋ ಫೇಸ್ 2ಎ ಮತ್ತು 2 ಬಿಗೆ 14,788 ಕೋಟಿ ರೂ. ಅನುದಾನ ಘೋಷಣೆ
* ಒಟ್ಟು 27 ರಾಜ್ಯಗಳಲ್ಲಿ 1,016 ಕಿ.ಮೀ ಮೆಟ್ರೋ ಮಾರ್ಗದ ಗುರಿ
* ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿ
- ತಮಿಳುನಾಡಿನಲ್ಲಿ 3500 ಕಿ.ಮೀ
- ಕೇರಳದಲ್ಲಿ 1,100 ಕಿ.ಮೀ
- ಪಶ್ಚಿಮ ಬಂಗಾಳದದಲ್ಲಿ 675 ಕಿ.ಮೀ
- ಅಸ್ಸಾಂನಲ್ಲಿ 1,300 ಕಿ.ಮೀ
* ರೈಲ್ವೆ ಇಲಾಖೆಗೆ 1.1 ಲಕ್ಷ ಕೋಟಿ ರೂ. ಅನುದಾನ
* ವಿದ್ಯುತ್ ವಲಯಕ್ಕೆ 3 ಲಕ್ಷ ಕೋಟಿ ರೂ. ಅನುದಾನ ಘೋಷಣೆ
* 32 ರಾಜ್ಯಗಳಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಜಾರಿ
* ಕೃಷಿ ಸಾಲಕ್ಕೆ 16.5 ಲಕ್ಷ ಕೋಟಿ ರೂ. ಅನುದಾನ
* ಎಲ್ಲ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಕಡ್ಡಾಯ
* ಗ್ರಾಮೀಣ ಮೂಲ ಸೌಕರ್ಯಕ್ಕೆ 40 ಸಾವಿರ ಕೋಟಿ ಅನುದಾನ
* ಎಲ್ಲ ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಕಡ್ಡಾಯ
* ಗ್ರಾಮೀಣ ಮೂಲ ಸೌಕರ್ಯಕ್ಕೆ 40 ಸಾವಿರ ಕೋಟಿ ಅನುದಾನ
* 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ
* ಲೇಹ್ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
* ಗೋವಾ ಸರ್ಕಾರಕ್ಕೆ 300 ಕೋಟಿ ರೂ ಅನುದಾನ
* ಟೀ ಕಾರ್ಮಿಕರಿಗೆ 300 ಕೋಟಿ ರೂ. ಅನುದಾನ
* ಜಲಜೀವನ ಮಿಷನ್ಗೆ 2.87 ಲಕ್ಷ ಕೋಟಿ ರೂ. ಅನುದಾನ ಮೀಸಲು
* ಸೋಲಾರ್, ಇನ್ವರ್ಟರ್ ಮೇಲಿನ ಆಮದು ಸುಂಕ ಏರಿಕೆ
* ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿ
* ಹತ್ತಿ, ಕಚ್ಚಾ ರೇಷ್ಮೆಯ ಅಬಕಾರಿ ಸುಂಕ ಹೆಚ್ಚಳ
* ಗೃಹ ಸಾಲದ ತೆರಿಗೆ ವಿನಾಯಿತಿ
* 2022ರ ಮಾರ್ಚ್ವರೆಗೆ ಪಡೆಯುವ ಹೋಂ ಲೋನ್ಗೆ ತೆರಿಗೆ ಕಟ್ಟಬೇಕಿಲ್ಲ
* ಇನ್ನು 1 ವರ್ಷ ಗೃಹ ಸಾಲದ ತೆರಿಗೆ ವಿನಾಯಿತಿ
* ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಿಂದ ವಿನಾಯಿತಿ
* 75 ವರ್ಷ ಮೇಲ್ಪಟ್ಟವರು ಟ್ಯಾಕ್ಸ್ ಕಟ್ಟುವಂತಿಲ್ಲ
PublicNext
01/02/2021 10:27 am