ನವದೆಹಲಿ: ಭಾರತದಿಂದ ಕದ್ದು ಆಸ್ಟ್ರೇಲಿಯಾಕ್ಕೆ ಸಾಗಿಸಲಾಗಿದ್ದ 29 ಪ್ರಾಚೀನ ಶಿಲ್ಪಗಳನ್ನು ಆಸ್ಟ್ರೇಲಿಯಾ ಮರಳಿ ಭಾರತಕ್ಕೆ ನೀಡಿದೆ. ಇಂದು ಆಸ್ಟ್ರೇಲಿಯಾದೊಂದಿಗೆ ಭಾರತದ ಶೃಂಗ ಸಭೆ ಆಯೋಜನೆಯಾಗಿದೆ. ಅದಕ್ಕೂ ಮುನ್ನ ಆಸ್ಟ್ರೇಲಿಯಾ ಈ ಪುರಾತನ ಕುರುಹುಗಳನ್ನು ವಾಪಸ್ ನೀಡಿರುವುದು ಗಮನಾರ್ಹ ಸಂಗತಿಯಾಗಿದೆ.
ಇದರಲ್ಲಿ ಶಿವ, ಭಗವಾನ್ ವಿಷ್ಣು ಹಾಗೂ ವಿಷ್ಣುವಿನ ಅವತಾರಗಳು, ವಿವಿಧ ದೇವರ ಭಾವಚಿತ್ರಗಳು, ಭಾರತೀಯ ಸಂಸ್ಕೃತಿಯ ಕಲಾಕೃತಿಗಳು, ವರ್ಣ ಚಿತ್ರಗಳು ಕೂಡ ಸೇರಿಕೊಂಡಿವೆ.
ಭಾರತಕ್ಕೆ ಬಂದ ಈ ಎಲ್ಲ ಪ್ರಾಚೀನ ವಸ್ತುಗಳನ್ನು ಪ್ರಧಾನಿ ಮೋದಿ ಪರಿಶೀಲಿಸಿದ್ದಾರೆ. ಇಂದು ನಡೆಯಲಿರುವ ವರ್ಚುವಲ್ ಶೃಂಗ ಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಭಾರತದಲ್ಲಿ ಸುಮಾರು 1500 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಮಾಡಲಿದ್ದಾರೆಂಬ ಮಾಹಿತಿ ಇದೆ.
PublicNext
21/03/2022 03:25 pm