ಬೆಳಗಾವಿ: 'ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಪಾರ್ಥಿವ ಶರೀರವನ್ನು ನವದೆಹಲಿಯಿಂದ ಬೆಳಗಾವಿಗೆ ತಂದು ಗೌರವ ಸಲ್ಲಿಸಲು ವಿಫಲವಾದ ಕೇಂದ್ರ ಮತ್ತು ರಾಜ್ಯದ ಸರ್ಕಾರಗಳು, ಆ ಕುಟುಂಬದವರಿಗೆ ನ್ಯಾಯ ಒದಗಿಸಲಿಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸುರೇಶ್ ಅಂಗಡಿ ದೆಹಲಿಯಲ್ಲಿ ನಿಧನರಾಗಿದ್ದರು. ಅಂಗಡಿಯವರ ಪಾರ್ಥೀವ ಶರೀರ ಬೆಳಗಾವಿಗೆ ತರಬೇಕಿತ್ತು. ಬೆಳಗಾವಿಯಲ್ಲಿ ಅಂತಿಮ ದರ್ಶನಕ್ಕೆ ಕ್ಷೇತ್ರದ ಜನರಿಗೆ ಅವಕಾಶ ಕೊಡಬಹುದಾಗಿತ್ತು. ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗಲಿಲ್ಲ ಎಂದು ಕಿಡಿಕಾರಿದ್ದಾರೆ.
ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಮಾಡಲು ಚರ್ಚೆಯಾಗಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಹೀಗಿದ್ದಾಗಲೂ ಈ ಸಂದರ್ಭದಲ್ಲಿ ನೊಂದ ಕುಟುಂಬಕ್ಕೆ ಸರ್ಕಾರ ನ್ಯಾಯ ಕಲ್ಪಿಸಲಿಲ್ಲ ಆಗಲಿಲ್ಲ, ಅವರು ಕೇಂದ್ರದ ಮಂತ್ರಿ ಆಗಿದ್ದರು. ಬೆಳಗಾವಿಯಲ್ಲಿ ಮಿಲಿಟರಿ ನೆಲೆ ಇದೆ. ಆದರೂ ಪಾರ್ಥಿವ ಶರೀರ ಬೆಳಗಾವಿಗೆ ತಂದು ಗೌರವ ಸಲ್ಲಿಸಲು ಸರ್ಕಾರಕ್ಕೆ ಆಗಲಿಲ್ಲ' ಎಂದು ಆರೋಪಿಸಿದರು.
ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಇಡೀ ಪ್ರಪಂಚಕ್ಕೆ ಕಪ್ಪು ಚುಕ್ಕೆ; ಮನುಕುಲಕ್ಕೆ ಅಪಮಾನ' ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಮಾತನಾಡಿದ ಅವರು, 'ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇಡೀ ದೇಶಕ್ಕೆ ರೋಗ ತಂದು ಕೊಡಲಿದೆ, ಪ್ರಪಂಚಕ್ಕೆ ಕಪ್ಪು ಚುಕ್ಕೆ; ಮನುಕುಲಕ್ಕೆ ಅವಮಾನವಾಗಿದೆ' ಎಂದು ವಾಗ್ದಾಳಿ ನಡೆಸಿದ ಅವರು ಪ್ರವಾಹ ಸಂತ್ರಸ್ತರಿಗೆ ನ್ಯಾಯ ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಕಿಡಿಕಾರಿದರು.
PublicNext
02/10/2020 02:07 pm