ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರನ್ನ ಬೆದರಿಸುವುದನ್ನು ಬಿಟ್ಟು ನಟನೆಯತ್ತ ಗಮನ ಕೊಡಿ: ಅರ್ಜುನ್ ಕಪೂರ್‌ಗೆ ಮಧ್ಯಪ್ರದೇಶ ಗೃಹ ಸಚಿವ ಕ್ಲಾಸ್

ಭೋಪಾಲ್: ಸಿನಿಮಾ ಬಹಿಷ್ಕಾರದ ಕುರಿತು ಬಾಲಿವುಟ್ ನಟ ಅರ್ಜುನ್ ಕಪೂರ್ ಅವರ ಟೀಕೆಗಳ ಕುರಿತು ಮಾತನಾಡಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, "ಫ್ಲಾಪ್ ನಟ ಸಾರ್ವಜನಿಕರಿಗೆ ಬೆದರಿಕೆ ಹಾಕುವುದು ಒಳ್ಳೆಯದು ಎಂದು ನಾನು ಭಾವಿಸುವುದಿಲ್ಲ. ಸಾರ್ವಜನಿಕರಿಗೆ ಬೆದರಿಕೆ ಹಾಕುವ ಬದಲು ನಿಮ್ಮ ನಟನೆಯತ್ತ ಗಮನ ಹರಿಸುವುದು ಉತ್ತಮ. ನಾನು ಅವರನ್ನು ಕೇಳಲು ಬಯಸುತ್ತೇನೆ, ನೀವು ಅಥವಾ ನಿಮ್ಮ 'ತುಕ್ಡೆ-ತುಕ್ಡೆ' ಬೆಂಬಲಿಗರು ಇತರ ಧರ್ಮಗಳನ್ನು ಗುರಿಯಾಗಿಟ್ಟುಕೊಂಡು ಚಲನಚಿತ್ರ ಮಾಡಲು ಧೈರ್ಯ ಮಾಡುತ್ತೀರಾ" ಎಂದು ಪ್ರಶ್ನಿಸಿದ್ದಾರೆ.

ಅರ್ಜುನ್ ಕಪೂರ್ ಹೇಳಿದ್ದೇನು?:

ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಟ್ ಟ್ರೆಂಡ್ ಬಗ್ಗೆ ಮಾತನಾಡಿದ ಅರ್ಜುನ್, 'ನಾವು ಒಟ್ಟಾಗಿ ಇದರ ವಿರುದ್ಧ ಏನಾದರೂ ಮಾಡಬೇಕಾಗಿದೆ. ಏಕೆಂದರೆ ಏನೇ ಬರೆದರೂ, ಯಾವುದೇ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೂ ಅವು ವಾಸ್ತವದಿಂದ ದೂರವಿದೆ. ಕೆಲವು ಅಜೆಂಡಾಗಳು, ವಾಸ್ತವವಾಗಿ ಅವು ಅಸ್ತಿತ್ವದಲ್ಲಿಲ್ಲದಿದ್ದಾಗ ಅವುಗಳನ್ನು ದೊಡ್ಡದಾಗಿ ಪರಿವರ್ತಿಸಲಾಗುತ್ತದೆ' ಎಂದು ಹೇಳಿದರು. 'ಇಂಡಸ್ಟ್ರಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ನಾವು ಕಣ್ಣು ಮುಚ್ಚಿ ಇರಲಿ ಬಿಡಿ ಎನ್ನುತ್ತಿದ್ದೇವೆ. ಥಿಯೇಟರ್‌ಗಳು ಮತ್ತೆ ತೆರೆದಾಗ, ಸಿನಿಮಾಗಳು ಚೆನ್ನಾಗಿ ಬರುತ್ತವೆ, ಎಲ್ಲವೂ ಚೆನ್ನಾಗಿರುತ್ತದೆ ಎಂದು ನಾವು ನಂಬಿದ್ದೇವೆ' ಎಂದರು 'ಕಳೆದ ಎರಡು ತಿಂಗಳಿನಿಂದ ಸಾಕಷ್ಟು ಚಿತ್ರಗಳು ಸೋತಿವೆ ಇದು ಚಿತ್ರರಂಗಕ್ಕೆ ದೊಡ್ಡ ಹೊಡೆತವಾಗಿದೆ' ಎಂದರು.

Edited By : Vijay Kumar
PublicNext

PublicNext

18/08/2022 10:55 am

Cinque Terre

40.6 K

Cinque Terre

2

ಸಂಬಂಧಿತ ಸುದ್ದಿ