ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತ: ಹೊರಟ್ಟಿ ಅಸಮಾಧಾನ

ಹುಬ್ಬಳ್ಳಿ: ಶಿಕ್ಷಣ ಇಲಾಖೆಯ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದ್ದು, ಅಕ್ಟೋಬರ್ 4 ರ ನಂತರ ಮತ್ತೆ ವರ್ಗಾವಣೆ ಪ್ರಾರಂಭಗೊಳುವುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ನಗರದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಯಾವುದು ಸರಿಯಿಲ್ಲ. ಹೊಸದಾಗಿ ಬರುವ ಮಂತ್ರಿಗಳಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಪರಿಣಾಮ ಮೂರ್ಖ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಕುಂಠಿತಗೊಂಡಿದೆ. ಈ ಹಿಂದೆಯೇ ಶಿಕ್ಷಕರ ವರ್ಗಾವಣೆಯನ್ನು ಸುಗ್ರಿವಾಜ್ಞೆ ಮೂಲಕ ಮಾಡಬೇಕಿತ್ತು. ಆದರೆ ಇಲಾಖೆಯ ಧರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮೂರು ತಿಂಗಳ ವಿಳಂಬವಾಗಿದೆ. ಇದೀಗ ಈ ವಿಷಯ ಕೋರ್ಟ್ ನಲ್ಲಿದ್ದು ಅಕ್ಟೋಬರ್ 4 ರಂದು ವಿಚಾರಣೆ ಇದ್ದು, ಆ ಬಳಿಕೆ ಮತ್ತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದರು.

ಕೋವಿಡ್ ನಿಂದ ಮೃತಪಟ್ಟ ಶಿಕ್ಷಕರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. ಅದರಂತೆ ಸರ್ಕಾರ 176 ಜನರ ಪಟ್ಟಿ ಮಾಡಿದ್ದು ಅವರಿಗೆಲ್ಲಾ ಪರಿಹಾರ ದೊರೆಯಲಿದೆ ಎಂದರು.

ಇನ್ನು, 1 ರಿಂದ 5 ಪ್ರಾಥಮಿಕ ಶಾಲೆ ಪ್ರಾರಂಭದ ಕುರಿತು ಮಾತನಾಡಿದ ಅವರು, ಒಂದರಿಂದ ಅಲ್ಲಾ ಸದ್ಯ 3,4,5 ನೇ ತರಗತಿ ಪ್ರಾರಂಭ ಮಾಡಬೇಕು. ಇದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವುದನ್ನು ತಪ್ಪಿಸಬೇಕು ಈ ಬಗ್ಗೆ ಮುಖ್ಯಮಂತ್ರಿಗಳಿಗೂ ತಿಳಿಸಿದ್ದೇನೆ ಎಂದರು. ಈ ಬಾರಿ ವಿಧಾನಸಭೆ ಅಧಿವೇಶನ ಉತ್ತಮ ರೀತಿಯಲ್ಲಿ ನಡೆದಿದ್ದು, ಸುದೀರ್ಘ ಚರ್ಚೆ ನಡೆಸಿ ವಿಧೇಯಕಗಳು ಪಾಸ್ಸಾಗಿವೆ ಎಂದರು.ನಾನು ಸರ್ಕಾರಿ ಬಂಗಲೆಯನ್ನು ಕೇಳಿದ್ದೆ, ಸರ್ಕಾರ ಸಭಾಪತಿ ಕೊಟ್ಟಿದೆ. ಅಕ್ಟೋಬರ್ 1 ರಂದು ಮನೆಗೆ ತೆರಳುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Edited By : Manjunath H D
PublicNext

PublicNext

29/09/2021 01:10 pm

Cinque Terre

60.18 K

Cinque Terre

2

ಸಂಬಂಧಿತ ಸುದ್ದಿ