ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲಾ ಶುಲ್ಕ ಸಮರ; ತಲೆ ಕೆಡಿಸ್ಕೊಂಡ ಸರ್ಕಾರ

ಬೆಂಗಳೂರು: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲಾ, ಕಾಲೇಜು ಪುನಾರಂಭಗೊಂಡಿವೆ. ಆದರೂ ಶುಲ್ಕ ಗೊಂದಲ ಇನ್ನೂ ಬಗೆಹರಿದಿಲ್ಲ. ಇದರಿಂದಾಗಿ ಸರ್ಕಾರ ತಲೆ ಕೆಡಿಸಿಕೊಳ್ಳುವಂತಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ಶಿಕ್ಷಣ ಇಲಾಖೆಯ ಆಯುಕ್ತರ ವರದಿಗಾಗಿ ಕಾಯುತ್ತಿದೆ. ಶಿಕ್ಷಣ ಇಲಾಖೆಯಿಂದ ಸಂಘಟನೆಗಳು, ಪೋಷಕರು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಇಂದು ಅಥವಾ ನಾಳೆ ಆಯುಕ್ತರ ವರದಿ ಸಚಿವರ ಕೈ ಸೇರಲಿದ್ದು, ಅಂತಿಮವಾಗಿ ಶುಲ್ಕ ನಿಗದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರೂಪ್ಸಾ ಸಂಘಟನೆಯ ಸಂಧಾನ ಸೂತ್ರ!

* 15 ಸಾವಿರ ಶುಲ್ಕ ಪಡೆಯೋ ಶಾಲೆಗಳು – ಶೇ.5 ಶುಲ್ಕ ವಿನಾಯಿತಿ.

* 15-25 ಸಾವಿರ ಶುಲ್ಕ ಪಡೆಯೋ ಶಾಲೆಗಳು – ಶೇ.10 ವಿನಾಯ್ತಿ.

* 25-50 ಸಾವಿರ ಶುಲ್ಕ ಪಡೆಯೋ ಶಾಲೆಗಳು – ಶೇ.25 ಶುಲ್ಕ ವಿನಾಯ್ತಿ.

* 50 ಸಾವಿರ ದಿಂದ 1 ಲಕ್ಷ ಶುಲ್ಕ ಪಡೆಯೋ ಶಾಲೆಗಳು – ಶೇ.35 ಶುಲ್ಕ ವಿನಾಯ್ತಿ.

* 1 ರಿಂದ 1.5 ಲಕ್ಷ ಶುಲ್ಕ ಪಡೆಯೋ ಶಾಲೆಗಳು – ಶೇ.50 ವಿನಾಯ್ತಿ.

* 1.5 ರಿಂದ 2 ಲಕ್ಷ ಶುಲ್ಕ ಪಡೆಯೋ ಶಾಲೆಗಳು – ಶೇ.75 ಶುಲ್ಕ ವಿನಾಯ್ತಿಗೆ ಒಪ್ಪಿಗೆ

ಕ್ಯಾಮ್ಸ್ ಸಂಧಾನ ಸೂತ್ರದ ಪ್ರಕಾರ ಇಡೀ ವರ್ಷದ ಶುಲ್ಕ ಪಾವತಿಗೆ ಒತ್ತಾಯ ಮಾಡುವುದಿಲ್ಲ. ಸ್ಪೆಷಲ್ ಡೆವಲಪ್‍ಮೆಂಟ್ ಫೀಸ್ ಈ ಬಾರಿ ತೆಗೆದುಕೊಳ್ಳುವುದಿಲ್ಲ. ಟರ್ಮ್ ಫೀಸ್ ಕೂಡಾ ಕೈ ಬಿಡಲು ಶಾಲೆಗಳು ಒಪ್ಪಿಕೊಂಡಿವೆ. ಪಠ್ಯೇತರ ಚಟುವಟಿಕೆಗಳ ಶುಲ್ಕವನ್ನು ಪಡೆಯೋದಿಲ್ಲ. (ಉದಾ- ಈಜು, ಡ್ಯಾನ್ಸ್, ಡ್ರಾಯಿಂಗ್ ಇತ್ಯಾದಿ). ಕಂಪ್ಯೂಟರ್ ಫೀಸ್ ನಲ್ಲಿ ಶುಲ್ಕ ಕಡಿತ ಮಾಡಲಾಗುತ್ತೆ. ಸ್ಕೂಲ್ ವ್ಯಾನ್ ಫೀಸ್‍ನಲ್ಲಿ ಆಪರೇಟಿಂಗ್ ಶುಲ್ಕ ಪಡೆಯಲ್ಲ

ಸರ್ಕಾರದ ಸಂಧಾನ ಸೂತ್ರ ಪ್ರಕಾರ ಈ ವರ್ಷ ಖಾಸಗಿ ಶಾಲೆಗಳ ಶುಲ್ಕವನ್ನು ಶೇಕಡಾ 25-35 ಕಡಿತ ಮಾಡುವುದು. ಬೋಧನೆ ಶುಲ್ಕ ಬಿಟ್ಟು ಉಳಿದ ಎಲ್ಲಾ ಶುಲ್ಕಕ್ಕೂ ಈ ವರ್ಷ ಕಡಿವಾಣ ಹಾಕುವುದು. ಎರಡನೇ ಕಂತು ಶುಲ್ಕ ಪಾವತಿಗೆ ಮಾತ್ರ ಆದೇಶ ಮಾಡುವುದು. ತಜ್ಞರ ಸಮಿತಿ ಶಿಫಾರಸ್ಸಿನ ಅನ್ವಯ ಶುಲ್ಕ ನಿಗದಿ ಮಾಡಬಹುದು.

Edited By : Vijay Kumar
PublicNext

PublicNext

18/01/2021 10:07 am

Cinque Terre

58.05 K

Cinque Terre

4

ಸಂಬಂಧಿತ ಸುದ್ದಿ