ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಂತ್ರಿ ಬಿ.ಸಿ. ನಾಗೇಶ್ ಅಟ್ಟರ್ ಫ್ಲಾಪ್.! ಶಿಕ್ಷಣ ಖಾತೆ ಅಶೋಕ್ ಗೆ ವರ್ಗಾವಣೆ ಆಯ್ತಾ?

ಬೆಂಗಳೂರು: ಜೂನ್ 23. ಬಸವರಾಜ ಬೊಮ್ಮಾಯಿ ಯವರು ಮುಖ್ಯಮಂತ್ರಿಗಳಾಗಿರುವ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿರುವಬಿ.ಸಿ. ನಾಗೇಶ್ ಅವರು ತಮ್ಮ ಖಾತೆಯನ್ನು ನಿಭಾಯಿಸಲಿಕ್ಕಾಗದೇ ಕಂದಾಯ ಸಚಿವ ಆರ್ ಅಶೋಕ್ ಅವರಿಗೇನಾದ್ರೂ ವಹಿಸಿಬಿಟ್ರಾ?

ಎಂಬ ಜಿಜ್ಞಾಸೆಗೆ ಕಾರಣವಾಗಿದ್ದು ಗುರುವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ನಡೆಸಿದ ಪತ್ರಿಕಾ ಗೋಷ್ಟಿ..

ಯಾಕೆಂದರೆ ಕಂದಾಯ ಸಚಿವರಾಗಿರುವ ಆರ್ ಅಶೋಕ್ ಅವರು ನಡೆಸಿದ ಪತ್ರಿಕಾಗೋಷ್ಟಿಯ ಸಬ್ಜೆಕ್ಟ್ ಪೂರ್ತಿಯಾಗಿ ಶಿಕ್ಷಣ ಇಲಾಖೆಯದ್ದೇ ಆಗಿತ್ತು ಮತ್ತು ಅತ್ಯಂತ ವಿವಾದಿತ ವಿಚಾರವಾದ ಪಠ್ಯ ಪುಸ್ತಕ ಪರಿಷ್ಕರಣೆಯ ವಿಷಯವನ್ನೇ ಆಧರಿಸಿದ್ದಾಗಿತ್ತು.

ಸುಮಾರು ಒಂದೂವರೆಯಿಂದ ಎರಡು ತಾಸುಗಳ ಸುದೀರ್ಘ ಅವಧಿ ತನಕ ಮಾಧ್ಯಮಗೋಷ್ಟಿ ನಡೆಸಿದ ಅಶೋಕ್ ಗೋಷ್ಟಿ ಉದ್ದಕ್ಕೂ ಪಠ್ಯಪುಸ್ತಕ ಪರಿಷ್ಕರಣೆಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಠ್ಯಪುಸ್ತಕದಲ್ಲಿದ್ದ ತಪ್ಪುಗಳ ದೊಡ್ಡ ಪಟ್ಟಿಯನ್ನೇ ಮಾಡಿಕೊಂಡು ಬಂದಿದ್ದರು.

ಆದರೆ ಪೂರ್ತಿಯಾಗಿ ಶಿಕ್ಷಣ ಇಲಾಖೆಗೇ ಸಂಬಂಧಿಸಿದ ಮಾಧ್ಯಮ ಗೋಷ್ಟಿಯಲ್ಲಿ ಶಿಕ್ಷಣ ಸಚಿವರೇ ನಾಪತ್ತೆ ಯಾಗಿ ಹೋಗಿದ್ದರು.. ಬದಲಿಗೆ ಅಶೋಕ್ ಅವರ ಎಡಬಲಗಳಲ್ಲಿ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಆಸೀನರಾಗಿದ್ದರು.

ಶಿಕ್ಷಣ ಸಚಿವರು ಎಲ್ಲಿದ್ದಾರೆ? ನೀವ್ಯಾಕೆ ಶಿಕ್ಷಣ ಖಾತೆಯ ವಿಷಯದ ಮೇಲೆ ಪತ್ರಿಕಾಗೋಷ್ಟಿ ನಡೆಸುತ್ತಿದ್ದೀರಿ ಎಂಬ ವರದಿಗಾರರ ಪ್ರಶ್ನೆಗೆ ಅಶೋಕ್ ಬಳಿ ಉತ್ತರ ಇರಲಿಲ್ಲ..

ಇದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಖಾತೆ ನಿಭಾಯಿಸುವಲ್ಲಿ ಎಷ್ಟರ ಮಟ್ಟಿಗೆ ಅಟ್ಟರ್ ಫ್ಲಾಪ್ ಎದ್ದು ಹೋಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಕರೆದ ಪತ್ರಿಕಾಗೋಷ್ಟಿಯಂತಿತ್ತು

-ಪ್ರವೀಣ್ ನಾರಾಯಣ್ ರಾವ್

Edited By : Somashekar
PublicNext

PublicNext

23/06/2022 08:07 pm

Cinque Terre

80.32 K

Cinque Terre

2

ಸಂಬಂಧಿತ ಸುದ್ದಿ