ಬೆಂಗಳೂರು: ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮತ್ತೊಂದು ವಿಚಾರಕ್ಕೆ ಈಗ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಹೌದು. 2017 ರಲ್ಲಿ ಇದೇ ರೋಹಿತ್ ಚಕ್ರತೀರ್ಥ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದು ಡಾ.ಅಂಬೇಡ್ಕರ್ ಅವರ ಬಗ್ಗೆ ಅವಮಾನಕರವಾದ ಫೇಸ್ ಬುಕ್ ಪೋಸ್ಟ್ ಆಗಿದೆ. ಅದೇ ಫೋಸ್ಟ್ ಈಗ ಮತ್ತೆ ವೈರಲ್ ಆಗಿದೆ.
ಅಂಬೇಡ್ಕರ್ ಅವ್ರು ಜಗತ್ತಿನ ಜಲತಂತ್ರಜ್ಞರು,ವೈದ್ಯರು,ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು,ವಕೀಲರು,ರಾಕೆಟ್ ತಜ್ಞರು ಆಗಿದ್ದರು ಅನ್ನೋ ಪೋಸ್ಟ್ ಇದಾಗಿದೆ. ಇದೇ ಪೊಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಮಕ್ಕೆ ಆಗ್ರಹ ಕೂಡ ಬರಲಾಗಿದೆ. ಆದರೆ, ಈ ಪೋಸ್ಟ್ ನಿಜಕ್ಕೂ ರೋಹಿತ್ ಚಕ್ರತೀರ್ಥರದ್ದೇ ಆಗಿದಿಯೇ ಅನ್ನೋ ಅನುಮಾನವೂ ಇದರ ಬೆನ್ನಲ್ಲಿಯೇ ಮೂಡಿದೆ.
PublicNext
01/06/2022 03:16 pm