ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ v/s ಕೇಸರಿ ಶಾಲು : ಅಂತಿಮ ನಿರ್ಣಯ ಘೋಷಿಸಿದ ಸರ್ಕಾರ

ಬೆಂಗಳೂರು: ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ಹಿಜಾಬ್ ಗದ್ದಲ ಶುರುವಾಗಿದೆ. ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಈ ಸಮವಸ್ತ್ರದ ಕಿರಿಕ್ ಸದ್ಯ ರಾಜ್ಯವಾಪಿ ವ್ಯಾಪಿಸಿದ್ದುವ ಭಾರಿ ಚರ್ಚೆಗೆ ಕಾರಣವಾಗಿತ್ತು.ಇತ್ತಿಚೆಗೆ ಹಿಜಾಬ್ ಧಾರಿಗಳಿಗೆ ಕಾಲೇಜಿನಲ್ಲಿ ಅವಕಾಶ ನೀಡುವುದಾದರೆ ನಾವು ಕೇಸರಿ ಶಾಲು ಹಾಕಿರುತ್ತೇವೆ ಎಂದು ವಿದ್ಯಾರ್ಥಿ ವಿದ್ಯಾರ್ತಿಗಳ ಮಧ್ಯೆಯೇ ವೈಮನಸ್ಸು ಬೆಳೆದಿತ್ತು.

ಸದ್ಯ ಈ ಎಲ್ಲ ಗದ್ದಲ ಗಲಾಟೆಗೆ ಫುಲ್ ಸ್ಟಾಫ್ ಇಟ್ಟ ರಾಜ್ಯ ಸರ್ಕಾರ ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೇಸರಿ ಶಾಲು, ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ.

ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ.ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

05/02/2022 07:27 am

Cinque Terre

56.5 K

Cinque Terre

53

ಸಂಬಂಧಿತ ಸುದ್ದಿ