ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಪ್ರಧಾನಿ‌ನರೇಂದ್ರ ಮೋದಿ

ಮೈಸೂರು ಜೂನ್ 20 ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಾಡದೇವತೆ ,ಬೆಟ್ಟದ ಒಡತಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದುಪೂಜೆ ಸಲ್ಲಿಸಿದರು..ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಬೆಟ್ಟದ ರಸ್ತೆ ಹಾಗೂ ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರಧಾನಿ ಅವರನ್ನು ದೇಗುಲದ ಮುಖ್ಯ ಅರ್ಚಕ ಎನ್‌.ಶಶಿಶೇಖರ ದೀಕ್ಷಿತ್‌ ಸ್ವಾಗತಿಸಿದರು.

ರೇಷ್ಮೆಯ ಕೇಸರಿ ಶಾಲು, ಪಂಚೆ ಧರಿಸಿ ದೇವಾಲಯದ ಹೆಬ್ಬಾಗಿಲಿನಲ್ಲಿರುವ ಚಾಮುಂಡಿ ದೇವಿಯ ಪಾದಗಳಿಗೆ ನಮಿಸಿ ದೇಗುಲದ ನವರಂಗವನ್ನು ಪ್ರವೇಶಿಸಿದ ಮೋದಿ ಗರ್ಭಗುಡಿಯ ಬಳಿ ಆಸೀನರಾಗಿ ಸಂಕಲ್ಪ ಪೂಜೆ ಸಲ್ಲಿಸಿದರು. ನಂತರ ಪ್ರಸಾದ ಸ್ವೀಕರಿಸಿದರು.

ಶಶಿಶೇಖರ್‌ ದೀಕ್ಷಿತ್‌ ಪ್ರಧಾನಿ ಅವರಿಗೆ ಶ್ವೇತ ವಸ್ತ್ರವನ್ನು ಹೊದಿಸಿ ಫಲತಾಂಬೂಲ ನೀಡಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಉಪಸ್ಥಿತರಿದ್ದರು..ಪ್ರವೀಣ್ ರಾವ್

Edited By : Nagesh Gaonkar
PublicNext

PublicNext

20/06/2022 11:07 pm

Cinque Terre

98.07 K

Cinque Terre

2

ಸಂಬಂಧಿತ ಸುದ್ದಿ