ದಾವಣಗೆರೆ: ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ರಾ ರಾ ರುಕ್ಕಮ್ಮ... ಎಕ್ಕಾ ಸಕ್ಕಾ ಎಕ್ಕಾಸಕ್ಕಾ ಹಾಡು ಭಾರೀ ಜನಪ್ರಿಯತೆ ಗಳಿಸಿದೆ. ಈ ಹಾಡಿಗೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ.
ನ್ಯಾಮತಿ ಗೋವಿನಕೋವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಕಡೆ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಜಬರ್ದಸ್ತ್ ಸ್ಟೆಪ್ ಹಾಕಿದರು. ಎಲ್ಲೆಡೆ ಎಕ್ಕಾ ಸಕ್ಕಾ ಮ್ಯೂಸಿಕ್ ಕೇಳಿದರೆ ಸಾಕು ಜನರು ಕುಣಿದು ಕುಪ್ಪಳಿಸುತ್ತಾರೆ. ಮಕ್ಕಳು ಈ ಹಾಡಿಗೆ ನೃತ್ಯ ಮಾಡುವಾಗ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ ಹಂಗಲ್ಲಾ, ಹಿಂಗೆ ಡ್ಯಾನ್ಸ್ ಮಾಡಬೇಕು ಎಂದು ಹೇಳಿ ಕುಣಿಯಲು ಆರಂಭಿಸಿದರು. ಶಾಸಕರೇ ಕುಣಿಯುತ್ತಿದ್ದಂತೆಯೇ ಮಕ್ಕಳು ರೊಚ್ಚಿಗೆದ್ದು ಸ್ಟೆಪ್ ಹಾಕಿದರು.
ಪಟಾಕಿ ಪೋರಿ ಹಾಡಿಗಂತೂ ರೇಣುಕಾಚಾರ್ಯ ಸ್ಟೆಪ್ ಸೂಪರ್ರೋ ಸೂಪರ್. ಮಕ್ಕಳ ಜೊತೆ ಕನ್ನಡದ ಜನಪ್ರಿಯ ಹಾಡುಗಳಿಗೆ ಕುಣಿದು ಕುಪ್ಪಳಿಸುವ ಮೂಲಕ ಗ್ರಾಮಸ್ಥರನ್ನು ರಂಜಿಸಿದರು.
PublicNext
20/06/2022 06:54 pm