ಲಕ್ನೋ: ಭಾರತೀಯ ಜನತಾ ಪಾರ್ಟಿ ಶಾಸಕನಿಗೆ ಮಹಿಳೆಯರ ಗುಂಪೊಂದು ಮಣ್ಣಿನ ನೀರಿನ ಸ್ನಾನ ಮಾಡಿಸಿದೆ. ಈ ಘಟನೆಯ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆದರೆ, ಈ ಮಣ್ಣಿನ ಸ್ನಾನದ ಹಿಂದಿನ ಕಾರಣ ತಿಳಿದ ನೆಟ್ಟಿಗರು ಶಾಕ್ ಕೂಡ ಆಗಿದ್ದಾರೆ. ಹೌದು. ಉತ್ತರ ಪ್ರದೇಶದ ಮಹಾರಾಜ್‌ಗಂಜನಲ್ಲಿ ಮಹಿಳೆಯರು ಗುಂಪು ಶಾಸಕ ಜಯಮಂಗಲ್ ಕನೋಜಿಯಾಗೆ ಮಣ್ಣಿನ ನೀರಿನ ಸ್ನಾನ ಮಾಡಿಸಿದೆ.
ಆದರೆ, ಇದೊಂದು ಶಿಕ್ಷೆನೂ ಅಲ್ಲ. ಶಾಸಕನ ಮೇಲೆ ಮಹಿಳೆಯರು ತೋರಿದ ಸಿಟ್ಟು ಅಲ್ಲ. ಇದು ಇಲ್ಲಿಯ ಆಚರಣೆಯಾಗಿದೆ. ಮಳೆ ದೇವರ ಒಲಿಸಿಕೊಳ್ಳುವ ಆಚರಣೆ ಭಾಗವಾಗಿಯೇ ಮಹಿಳೆಯರು ಈ ಶಾಸಕನಿಗೆ ಮಣ್ಣಿನ ನೀರಿನ ಸ್ನಾನ ಮಾಡಿಸಿದ್ದಾರೆ.
PublicNext
17/07/2022 12:00 pm