ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಪರ್ಣಾ ಹಾಗೂ ಶಂಕರ್ ಪ್ರಕಾಶ್ ಅವರು ನಿರೂಪಕರಾಗಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಆದರೆ ಇಂದಿನ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪರ್ಣಾ ಅವರ ಬದಲಾಗಿ ಡಾ.ಗಿರಿಜಾ ಎಂಬವರು ನಿರೂಪಣೆ ಮಾಡಿದರು. ಕಳೆದ ವರ್ಷ ನಡೆದ ಧರಣಿಯಿಂದ ಈ ಬದಲಾವಣೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಗಿದ್ರೆ ಆಗಿದ್ದಾದ್ರು ಏನು ಅಂತ ಗೊತ್ತಾ?
2021 ಆಗಷ್ಟ್ 8ರಂದು ಡಾ.ಗಿರಿಜಾ ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು. 'ಸರ್ಕಾರಿ ಕಾರ್ಯಕ್ರಮದಲ್ಲಿ ಕೇವಲ ಇಬ್ಬರು ನಿರೂಪಕರಿಗೆ ಮಾತ್ರ ಅವಕಾಶ ಕೊಡ್ತಾರೆ. ಆ ಇಬ್ಬರು ನಿರೂಪಕರಿಂದ ಹಲವರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಹೊಸಬರಿಗೆ ನಿರೂಪಣೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.
ಅಂದಿನ ಹೋರಾಟಕ್ಕೆ ಡಾ.ಗಿರಿಜಾ ಅವರಿಗೆ ಜಯ ಸಿಕ್ಕಂತಾಗಿದೆ. ಹೀಗಾಗಿ ಸರ್ಕಾರಿ ಕಾರ್ಯಕ್ರಮಗಳ ನಿರೂಪಕರಲ್ಲಿ ಬದಲಾವಣೆಗೆ ಆಗಿ, ಗಿರಿಜಾ ಅವರಿಗೆ ಈ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವಕಾಶ ದೊರೆತಿದೆ.
PublicNext
26/01/2022 06:32 pm