ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋಸ್ಟ್ ವಾಂಟೆಡ್ ಆರೋಪಿ ಸಿಕ್ಕಿದ್ದು ಮಾತ್ರ ಸಿದ್ದು ಪಕ್ಕ !

ಬೆಂಗಳೂರು:ಪೊಲೀಸರ ಮೇಲೇನೆ ಹಲ್ಲೆ ಮಾಡಿ ಪರಾರಿಯಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಸಿಕ್ಕಿದ್ದು ಎಲ್ಲಿ ಗೊತ್ತೇ ? ಹೌದು ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲಿಯೇ ಈತ ಸಿಕ್ಕಿದ್ದಾನೆ. ಇನ್ನೂ ಒಂದು ವಿಚಾರ ಹೇಳೋದಾದ್ರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಕ್ಕದಲ್ಲಿಯೇ ಈತ ಕುಳಿತಿದ್ದಾನೆ.

ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದವನ ಹೆಸರು ಸಿದ್ದರಾಜು. ಈತ ಗುಂಡ್ಲುಪೇಟೆಯ ಹೊಣಕನಪುರ ಗ್ರಾಮದ ನಿವಾಸಿ.ಈತನ ಮೇಲೆ ಹಲವಾರು ಕೇಸ್ ಗಳಿವೆ.ಐವರು ಪೊಲೀಸರ ಮೇಲೆ ಹಲ್ಲೆ ಮಾಡಿ ಈತ ತಲೆಮರೆಸಿಕೊಂಡಿದ್ದ. ಆದರೆ ಎಲ್ಲಿಯೂ ಸಿಗದೇ ಇರೋ ಈತ ಮೇಕೆದಾಟು ಪಾದಯಾತ್ರೆಯಲ್ಲಿಯೇ ಪ್ರತ್ಯಕ್ಷ

ಸಿದ್ದರಾಮಯ್ಯನವರ ಪಕ್ಕದಲ್ಲಿಯೇ ಕುಳಿತಿರೋ ಈ ಫೋಟೋದ ಮೂಲಕವೇ ಈ ಸತ್ಯ ಗೊತ್ತಾಗಿದೆ. ವಿಶೇಷ ಅಂದ್ರೆ ವಿಷಯ ತಿಳಿದ ಸಿದ್ದರಾಮಯ್ಯನವರೇ ಈತನನ್ನ ಬೈದು ಬುದ್ದಿ ಹೇಳಿ ಕಳಿಸಿದ್ದಾರಂತೆ. ಜಾತಿನಿಂದನೆ ಆರೋಪದ ಮೇಲೆ ಈತನಿಗೆ ಸಮನ್ಸ್ ಕೂಡ ಜಾರಿ ಆಗಿತ್ತು. ಪೊಲೀಸರು ಈತನನ್ನ ಬಂಧಿಸಲು ಹೋಗಿದ್ದರು. ಆಗಲೇ ಈತ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ.

Edited By :
PublicNext

PublicNext

14/01/2022 08:19 am

Cinque Terre

57.64 K

Cinque Terre

16

ಸಂಬಂಧಿತ ಸುದ್ದಿ