ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ ಕಾಯಿನ್ ವಿಚಾರದಲ್ಲಿ ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ: ಸಚಿವ ಸುಧಾಕರ್

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಯಾವ ವಿಚಾರಗಳನ್ನೂ ಮುಚ್ಚಿಟ್ಟಿಲ್ಲ. ಪ್ರತಿಪಕ್ಷಗಳ ಆರೋಪಗಳೆಲ್ಲ ಸುಳ್ಳು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಕೆ. ಸುಧಾಕರ್, ತನಿಖಾ ತಂಡ ಎಲ್ಲಾ ಮಾಹಿತಿಯನ್ನು ಇಂಟರ್ ಪೋಲ್, ಇಡಿ ಮತ್ತು ಸಿಬಿಐನೊಂದಿಗೆ ಹಂಚಿಕೊಂಡಿದೆ ಎಂದು ಹೇಳಿದರು. ನಾವು ಯಾವುದೇ ಸತ್ಯಗಳನ್ನು ಮರೆಮಾಚಲು ಅಥವಾ ಯಾರನ್ನೂ ರಕ್ಷಿಸಲು ಬಯಸುವುದಿಲ್ಲ, ನಾವು ಸಮಗ್ರ ತನಿಖೆ ನಡೆಸಲು ಬಯಸುತ್ತೇವೆ. ತನಿಖೆಗೆ ಆದೇಶಿಸಿದ್ದು ನಾವೇ. ಶೀಘ್ರದಲ್ಲೇ ಸರ್ಕಾರ ಎಲ್ಲ ಸಾಕ್ಷ್ಯಾಧಾರಗಳನ್ನು ಜನರ ಮುಂದಿಡಲಿದೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

14/11/2021 07:29 am

Cinque Terre

53.34 K

Cinque Terre

2

ಸಂಬಂಧಿತ ಸುದ್ದಿ