ರಾಜಸ್ಥಾನ: ಇಲ್ಲಿಯ ಕಾಂಗ್ರೆಸ್ ಶಾಸಕಿಯೊಬ್ಬರು ಸೋದರಳಿಯನ ಬಿಡುಗಡೆಗಾಗಿ ಪತಿ ಸಮೇತ ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತಿದ್ದ ಘಟನೆ ನಡೆದಿದೆ. ಸೋದರಳಿಯ ಕುಡಿದು ಗಾಡಿ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಆತನ ಬಿಡುಗಡೆಗಾಗಿಯೇ ಶಾಸಕಿ ರೋಷಾವೇಷದಿಂದಲೇ ಪ್ರತಿಭಟನೆ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕಿ ಹೆಸರು ಮೀನಾ ಕನ್ವರ್. ಪತಿಯ ಹೆಸರು ಉಮೇದ್ ಸಿಂಗ್.ಅಳಿಯನ ಬಿಡಿಸಲು ಜೋಧಪುರದ ಶ್ರೇಗಢ್ ಠಾಣೆಗೆ ಬಂದಿದ್ದರು. ಪೊಲೀಸರು ಶಾಸಕಿಯ ಮನವಿಯನ್ನ ಪೋನ್ ನಲ್ಲೂ ಕೇಳಲಿಲ್ಲ. ನೇರವಾಗಿ ಠಾಣೆಗೆ ಬಂದ್ರೂ ಕೇರ್ ಮಾಡಲಿಲ್ಲ. ಆಗಲೇ ಶಾಸಕಿ ರೊಚ್ಚಿಗೆದ್ದು ಎಲ್ಲರನ್ನೂ ಬೈದು ಹಾಕಿರೋದು. ಚೀರಾಟ-ಹಾರಾಟಕ್ಕೆ ಏನೂ ನಆಗೋದಿಲ್ಲ ಅಂತ ತಿಳಿದಾಗಲೇ ಶಾಸಕಿ ಧರಣಿ ಕುಳಿತರು.
ಕುಳಿತು ಇಂದಿನ ದಿನಗಳಲ್ಲಿ ಮದ್ಯ ಸೇವಿಸೋ ವಿಷಯ ದೊಡ್ಡದೇನೂ ಅಲ್ಲ. ಎಲ್ಲರೂ ಕುಡಿಯುತ್ತಾರೆ. ನನ್ನ ಅಳಿಯನೂ ಕುಡಿದಿದ್ದಾನೆ. ಅವನನ್ನ ಬಿಟ್ಟುಬಿಡಿ ಅಂತಲೇ ಶಾಸಕಿ ಕೇಳಿಕೊಂಡಿದ್ದಾಳೆ. ಆದರೂ ಪೊಲೀಸರು ಕೇಳದೇ ಇದ್ದಾಗ, ಶಾಸಕಿ ಮತ್ತು ಪೊಲೀಸ್ ರ ನಡುವೆ ದೊಡ್ಡ ಜಗಳವೇ ಆಗಿದೆ. ಡಿಸಿಪಿ ಮಧ್ಯೆ ಪ್ರವೇಶಿಸಿ ಜಗಳಕ್ಕೆ ಇತಿಶ್ರೀ ಹಾಡಿ ಶಾಸಕಿಯ ಅಳಿಯನ್ನ ಬಿಟ್ಟುಕಳಿಸಿದ್ದಾರೆ.
PublicNext
19/10/2021 05:44 pm