ಮಂಗಳೂರು: ಕೆಲಸದಾಳು ಮೇಲಿನ ಕೋಪಕ್ಕೆ ಮಾಲೀಕ ಹಾರಿಸಿದ ಗುಂಡು ಆತನ ಮಗನಿಗೆ ತಾಕಿರುವ ಘಟನೆ ಮಂಗಳೂರು ನಗರ ಮೋರ್ಗನ್ ಗೇಟ್ ಬಳಿ ನಡೆದಿದೆ.
ನಗರದ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೋ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಗುಂಡು ಹಾರಿಸಿದ ವ್ಯಕ್ತಿಯಾಗಿದ್ದಾರೆ. ರಾಜೇಶ್ ಹಾರಿಸಿದ ಗುಂಡು ಅವರ ಮಗ ಸುಧೀಂದ್ರನ ತಲೆ ಭಾಗಕ್ಕೆ ತಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವೇತನದ ವಿಚಾರಕ್ಕೆ ಚಂದ್ರು ಮತ್ತು ಅಶ್ರಫ್ ಎಂಬವರು ನಿನ್ನೆ ಮಾಲೀಕ ರಾಜೇಶ್ ಪ್ರಭು ಜೊತೆಗೆ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಮಾಲೀಕ ರಾಜೇಶ್ ಕಚೇರಿ ಒಳಗೆ ಹೋಗಿ ತಮ್ಮ ಲೈಸೆನ್ಸ್ ರಿವಾಲ್ವರ್ ಹಿಡಿದು ಹೊರ ಬಂದಿದ್ದಾರೆ. ಬಳಿಕ ರಿವಾಲ್ವರ್ ಹಿಡಿದು ಸಿಬ್ಬಂದಿ ಮೇಲೆ ಕೈ ಹಾಕಿ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಆದರೆ ಅಚಾನಕ್ ಆಗಿ ಕೈಯ್ಯಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಹಾರಿದ್ದು, ಸುಧೀಂದ್ರ ತಲೆ ಭಾಗ ಬಿದ್ದಿದೆ.
ಘಟನೆಯ ದೃಶ್ಯವು ಕಚೇರಿ ಹೊರಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಮಾಹಿತಿ ಪಡೆದುಕೊಂಡ ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ರಾಜೇಶ್ ಪ್ರಭು ಸತ್ಯ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭಿಸಿದೆ.
PublicNext
06/10/2021 12:28 pm