ಚಿಕ್ಕಮಗಳೂರು: ಚಲಿಸುವ ರೈಲಿಗೆ ತಲೆಕೊಟ್ಟು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಇನ್ನು ಹಸಿಯಾಗಿಯೇ ಉಳಿದಿದೆ.
ಆದ್ರೆ ಸಾವಿನ ಸುತ್ತ ಸಾಕಷ್ಟು ಅನುಮಾನದ ಹುತ್ತ ಬೆಳೆದಿದೆ ಡೆತ್ ನೋಟ್ ಬರೆದಿಟ್ಟು ಡಿಸೆಂಬರ್ 28 ರಂದು ಆತ್ಮಹತ್ಯೆಗೆ ಶರಣಾಗಿದ್ದರು ಆದ್ರೆ ಡೆತ್ ನೋಟ್ ನಲ್ಲಿ ಸಾವಿನ ಬಗ್ಗೆ ನಿಕರ ಕಾರಣ ತಿಳಿದು ಬಂದಿಲ್ಲ.
ಹೌದು, ಸುಮಾರು ಎರಡು ಪುಟದ ಡೆತ್ ನೋಟ್ ಬರೆದಿದ್ದಾರೆ ನಿಖರವಾಗಿ ಏನು ಬರೆದಿದ್ದರೂ ಅನ್ನೋದು ಈ ಕ್ಷಣಕ್ಕೂ ನಿಗೂಡವಾಗಿಯೇ ಉಳಿದಿದೆ.
ಸದ್ಯ ಧರ್ಮೇಗೌಡರ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹಾಸನ ಜಿಲ್ಲೆ ಅರಸೀಕೆರೆ ರೈಲ್ವೆ ಡಿವೈಎಸ್ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಸೂರಜ್ ಸಾವಿಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಪ್ರಯತ್ನ ನಡೆಸಿದ್ದಾರೆ.
ಡೆತ್ ನೋಟ್ ನಲ್ಲಿ ಆಸ್ತಿ ವಿಚಾರ ಪ್ರಸ್ತಾಪ ಮಾಡಿರೋ ಧರ್ಮೇಗೌಡರು, ನನ್ನ ಆಸ್ತಿಯನ್ನ ನನ್ನ ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಿ ಎಂದು ಉಲ್ಲೇಖ ಮಾಡಿದ್ದಾರೆ.
ಇನ್ನು ವಿಧಾನಪರಿಷತ್ ನಲ್ಲಿ ನಡೆದ ಘಟನೆ ಮನಸ್ಸಿಗೆ ನೋವು ತಂದಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ಆದರೆ ಸಾವಿಗೆ ಇದೇ ಕಾರಣ, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆಂದು ಎಲ್ಲೂ ಹೇಳಿಲ್ಲ.
ಇನ್ನು ಧರ್ಮೇಗೌಡರ ಕೈ ಬರಹ ಖಾತ್ರಿ ಮಾಡಿಕೊಳ್ಳಲು ಬೆಂಗಳೂರಿನ ಎಫ್ ಎಸ್ ಎಲ್ ಗೆ ರವಾನೆ ಮಾಡಿ ತನಿಖೆ ಮುಂದುವರೆಸಿದ್ದಾರೆ.
PublicNext
06/01/2021 09:28 am