ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಬಿಎಲ್ ಸಂತೋಷ ಟ್ವೀಟ್
ಶಿವಮೊಗ್ಗದಲ್ಲಿ ರಾಷ್ಟ್ರ ವಿರೋಧಿ, ಹಿಂದೂ ವಿರೋಧಿ ಮೂಲಭೂತವಾದಿ ಶಕ್ತಿಗಳಿಂದ ಹರ್ಷ ಹತ್ಯೆಗೀಡಾಗಿದ್ದಾನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಮೊದಲ ಮೊದಲ ಪುಟದಲ್ಲಿ ಸುದ್ದಿಯಾಗುವುದಿಲ್ಲ. ಯಾಕೆಂದರೆ ಅವರು ಹಿಂದೂ ಆಗಿದ್ದರು. ಅವರು ರಾಷ್ಟ್ರೀಯವಾದಿಯಾಗಿದ್ದರು. ಹರ್ಷ ಕುಟುಂಬದ ಪರವಾಗಿ ನಿಲ್ಲೋಣ ಎಂದು ಟ್ವೀಟ್ ಮಾಡಿದ್ದಾರೆ.
#YesToUniform_NoToHijabಅನ್ನು ಬೆಂಬಲಿಸಿದ್ದಕ್ಕಾಗಿ ಶಿವಮೊಗ್ಗದಲ್ಲಿ ಅವರ ಮನೆಯ ಮುಂದೆಯೇ ಜಿಹಾದಿ ಮೂಲಭೂತವಾದಿಗಳು ಹರ್ಷನನ್ನು ಬರ್ಬರವಾಗಿ ಕೊಂದಿದ್ದಾರೆ. ಬಲಿದಾನಗೈದ ಹರ್ಷ ಅವರಿಗೆ ನಮನಗಳು. ಈ ದುಃಖದ ಸಮಯದಲ್ಲಿ ನಾವು ಅವರ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
PublicNext
21/02/2022 10:16 pm