ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಬಿಜೆಪಿ ತಿರಂಗ ಯಾತ್ರೆ ವೇಳೆ ಯುವಕರ ಹೊಡೆದಾಟ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆಸಲಾದ ತಿರಂಗಾ ಯಾತ್ರೆಯಲ್ಲಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ‌.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರನ್ನು ಸ್ವಾಗತಿಸಲು ಮೋತಿಝೀಲ್ ಪ್ರದೇಶದಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಹೊಡೆದಾಟ ಶುರುವಾಗಿದೆ. ನಂತರ ಅಲ್ಲಿದ್ದ ಕೆಲ ನಾಯಕರು ಯುವಕರನ್ನು ಸಮಾಧಾನಪಡಿಸಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ತಿರಂಗಾ ಯಾತ್ರೆಯನ್ನು ದಂಗೆ ಯಾತ್ರೆ ಮಾಡಬೇಡಿ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

11/08/2022 06:41 pm

Cinque Terre

61.62 K

Cinque Terre

2

ಸಂಬಂಧಿತ ಸುದ್ದಿ